ಹಿರಿಯಡ್ಕ: ಅನಾರೋಗ್ಯದ ಕಾರಣ 83ರ ವೃದ್ಧೆ ನೇಣಿಗೆ ಶರಣು

ಹಿರಿಯಡ್ಕ ಜೂ.15 (ಉಡುಪಿ ಟೈಮ್ಸ್ ವರದಿ): ತಮ್ಮ ಅನಾರೋಗ್ಯದ ಕಾರಣ ಮನನೊಂದು 83 ವರ್ಷದ ವಯೋವೃದ್ಧರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕದ ಕಣಜಾರು ಗ್ರಾಮದ ಗುಡೆಯಂಗಡಿ ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಎಸ್. ಲಲಿತ ಆತ್ಮಹತ್ಯೆ ಮಾಡಿಕೊಂಡವರು. ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಅದಕ್ಕಾಗಿ ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಮನನೊಂದು ತಮ್ಮ ವಾಸದ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!