ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ ಜೂ.13 (ಉಡುಪಿ ಟೈಮ್ಸ್ ವರದಿ) : ಫ್ಯಾಟಿ ಲಿವರ್ ದಿನದ ಅಂಗವಾಗಿ ಉಡುಪಿಯ ಆದರ್ಶ ಆಸ್ಪತ್ರೆ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.
ಈ ಸಭಾ ಕಾರ್ಯಕ್ರಮವನ್ನು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲ ಚಂದ್ರಶೇಖರ್ ಹಾಗೂ ಆದರ್ಶ ಆಸ್ಪತ್ರೆಯ ಯಕೃತ್ತು ಮತ್ತು ಕರಳು ಸಂಬಂಧಿ ರೋಗಗಳ ತಜ್ಞರಾದ ಡಾ. ಸತೀಶ್ ಕೆ. ನಾಯಕ್ ಹಾಗೂ ಸ್ತ್ರೀರೋಗ ತಜ್ಞರಾದ ಡಾ. ರಂಜಿತಾ ಎಸ್. ನಾಯಕ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಆದರ್ಶ ಆಸ್ಪತ್ರೆಯ ಯಕೃತ್ತು ಮತ್ತು ಕರಳು ಸಂಬಂಧಿ ರೋಗಗಳ ತಜ್ಞರಾದ ಡಾ. ಸತೀಶ್ ಕೆ. ನಾಯಕ್ ಅವರು ಲಿವರ್ ನ ಮಹತ್ವ, ಫ್ಯಾಟಿ ಲಿವರ್ ನಿಂದ ಆಗುವ ದುಷ್ಪರಿಣಾಮಗಳು, ಹಾಗೂ ಆಹಾರ ಪದ್ದತಿ , ವ್ಯಾಯಾಮದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮವನ್ನು ಡಯಟಿಷನ್ ಅನುಶ್ರೀ ನಿರೂಪಿಸಿ, ಸ್ವಾಗತಿಸಿದರು.