ಹಿಂದುಳಿದವರಿಗಾಗಿ ಐಸೊಲೇಷನ್ ಸೆಂಟರ್ ತೆರೆಯುವಂತೆ ಅರುಣ್ ಕುಮಾರ್ ಮನವಿ

ಉಡುಪಿ ಮೇ.11(ಉಡುಪಿ ಟೈಮ್ಸ್ ವರದಿ) ಹಿಂದುಳಿದವರಿಗಾಗಿ ಐಸೊಲೇಷನ್ ಸೆಂಟರ್ ತೆರೆಯುವಂತೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ್ ಕುಮಾರ್ ಕಲ್ಗದ್ದೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೊರೋನಾ ವೈರಸ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಗಳ ಕೊರತೆಯಿಂದ ಮನೆಗಳಲ್ಲಿಯೇ ಐಸೋಲೇಷನ್ ಆಗುವಂತೆ ಸೂಚಿಸಲಾಗಿದೆ. ಆದರೆ ಗುಡಿಸಲು ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುವ ಹಿಂದುಳಿದ ವರ್ಗದ ಜನರಿಗೆ ಐಸೋಲೇಷನ್ ಕೇಂದ್ರದ ಅಗತ್ಯವಿದೆ.

ಆದ್ದರಿಂದ ಗುಡಿಸಲು‌ ಹಾಗೂ ಕಚ್ಚಾ ಮನೆಗಳಲ್ಲಿ ವಾಸಿಸುವವರಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ ಐಸೋಲೇಷನ್ ಸೆಂಟರ್ ಆರಂಭ ಮಾಡಬೇಕು. ಹಾಗೂ ಇದಕ್ಕಾಗಿ ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿರುವ ಹಾಸ್ಟೆಲ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಜಿಲ್ಲಾಡಳಿತಗಳು ಈ ಕುರಿತು ಶೀಘ್ರದಲ್ಲಿಯೇ ಕ್ರಮಕೈಗೊಳ್ಳ ಬೇಕೆಂದು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!