ಉಡುಪಿ : ಜೂ.13-ಆದರ್ಶ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ ಜೂ.11(ಉಡುಪಿ ಟೈಮ್ಸ್ ವರದಿ): ನಗರದ ಆದರ್ಶ ಆಸ್ಪತ್ರೆ ಇದರ ವತಿಯಿಂದ ಫ್ಯಾಟಿ ಲಿವರ್ ದಿನದ ಪ್ರಯುಕ್ತ ಜೂ.13 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಯಕೃತ್ ಮತ್ತು ಕರಳು ಸಂಬಂಧಿ ಕಾಯಿಲೆಗಳ ತಜ್ಞರೊಂದಿಗೆ ಸಮಾಲೋಚನೆ , ಆಹಾರ ಪಥ್ಯ ಸಮಾಲೋಚನೆ, ರಕ್ತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 0820 2702100-109|9663330864 ದೂ.ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ