ಮೊದಲ ದಿನದ ಲಾಕ್ ಡೌನ್ ಯಶಸ್ವಿ: ಕುಮಾರ್ಚಂದ್ರ

ಉಡುಪಿ ಮೇ.10 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಇಂದಿನ ಮೊದಲ ದಿನದ ಲಾಕ್ ಡೌನ್ ನ್ನು ಶಾಂತ ರೀತಿಯಲ್ಲಿ ನಡೆಸಿ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಅವರು ತಿಳಿಸಿದ್ದಾರೆ

ಈ ಬಗ್ಗೆ ಉಡುಪಿ ಟೈಮ್ಸ್ ಗೆ ಮಾಹಿತಿ ನೀಡಿದ ಅವರು, ಇಂದು ಜಿಲ್ಲೆಯಲ್ಲಿ ಯಾವುದೇ ರೀತಿಯ ಕಠಿಣ ವಾದ ಕ್ರಮ ಕೈಗೊಂಡಿಲ್ಲ. 10 ಗಂಟೆ ಬಳಿಕ ಸಂಪೂರ್ಣವಾಗಿ ಜನರ ಓಡಾಟವನ್ನು ತಡೆದಿದ್ದೇವೆ. ಅತ್ಯಂತ ಅಗತ್ಯ ವೈದ್ಯಕೀಯ ಸೇವೆ ಹೊರತುಪಡಿಸಿ, ಅನಾವಶ್ಯಕವಾಗಿ ತಿರುಗಾಡುವುದನ್ನು ತಡೆದಿದ್ದೇವೆ. ಚೆಕ್ ಪೋಸ್ಟ್ ಗಳಲ್ಲಿ ವೈದ್ಯಕೀಯ ತುರ್ತು ಸೇವೆಗಳಿಗೆ ತೊಂದರೆ ಆಗದ ರೀತಿ ನೋಡಿಕೊಂಡಿದ್ದೇವೆ. ಎಲ್ಲಿಯೂ ಸಾರ್ವಜನಿಕರ ತುರ್ತು ಸೇವೆಗೆ ಅಢ್ಡಿಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಲಾಕ್ ಡೌನ್ ನ ಮೊದಲ ದಿನ ಒಟ್ಟು 117 ವಾಹನಗಳನ್ನು ಸೀಝ್ ಮಾಡಲಾಗಿದ್ದು ಈ ಪೈಕಿ 95 ದ್ವಿಚಕ್ರ ವಾಹನ,13 ನಾಲ್ಕು ಚಕ್ರದ ವಾಹನ, 3 ಮೂರು ಚಕ್ರದ ವಾಹನ ಹಾಗೂ, 7ಘನ ವಾಹನಗಳನ್ನು ಸೀಝ್ ಮಾಡಿದ್ದೇವೆ ಮತ್ತು 14 ಮಂದಿಯ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣವನ್ನು ದಾಖಲಿಸಿದ್ದೇವೆ. ಅವುಗಳಲ್ಲಿ ಉಡುಪಿಯಲ್ಲಿ 40 ದ್ವಿಚಕ್ರ ವಾಹನ, 2 ಮೂರು ಚಕ್ರದ ವಾಹನ 7 ನಾಲ್ಕು ಚಕ್ರದ ವಾಹನ, ಹಾಗೂ ನಾಲ್ವರ ವಿರುದ್ದ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣ. ಕಾರ್ಕಳದಲ್ಲಿ 18 ದ್ವಿಚಕ್ರ ವಾಹನ, 1 ನಾಲ್ಕು ಚಕ್ರದ ವಾಹನ, ನಾಲ್ವರ ವಿರುದ್ದ ನಿಯಮ ಉಲ್ಲಂಘನೆ ಪ್ರಕರಣ ಹಾಗೂ ಕುಂದಾಪುರದ ಲ್ಲಿ 37 ದ್ವಿಚಕ್ರ ವಾಹನ,1 ಮೂರು ಚಕ್ರ ವಾಹನ, 4 ನಾಲ್ಕು ಚಕ್ರದ ವಾಹನ, 7 ಘನವಾಹನ, ಆರು ಜನರ ವಿರುದ್ದ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಲಾಕ್ ಡೌನ್ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ಜಿಲ್ಲೆಯಲ್ಲಿ ಒಟ್ಟು ಬೆಳಗಿನ ಹೊತ್ತಲ್ಲಿ 28 ಹಾಗೂ ರಾತ್ರಿ ಹೊತ್ತಲ್ಲಿ 32 ಚೆಕ್ ಪೋಸ್ಟ್ ಗಳ ವ್ಯವಸ್ಥೆ ಯನ್ನು ಸಿದ್ದಮಾಡಲಾಗಿದೆ ಹಾಗೂ ಕೋವಿಡ್ ಮಾರ್ಗ ಸೂಚಿ ಪ್ರಕಾರ ಯಾರಿಗೂ ಪಾಸ್ ಕೊಡುವ ವ್ಯವಸ್ಥೆಯನ್ನು ಮಾಡಿಲ್ಲ‌ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!