‘ನೇತ್ರಜ್ಯೋತಿ ಕಾಲೇಜಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಆದವರಿಗೆ ಅರೆ ವೈದ್ಯಕೀಯ ಕ್ಷೇತ್ರದಲ್ಲಿ ವಿಫುಲ ಅವಕಾಶ
ಉಡುಪಿ ಜೂ.8(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ‘ನೇತ್ರಜ್ಯೋತಿ ಕಾಲೇಜಿನಲ್ಲಿ’ ಎಸೆಸೆಲ್ಸಿ ಮತ್ತು ಪಿಯುಸಿ ಆದ ವಿದ್ಯಾರ್ಥಿಗಳಿಗೆ ಅರೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ.
ರಶ್ಮಿ ಕೃಷ್ಣಪ್ರಸಾದ್ ಸಾರಥ್ಯದಲ್ಲಿ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್‌ನ ನೇತ್ರಜ್ಯೋತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಮತ್ತು ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸಂಸ್ಥೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ 18 ಬ್ಯಾಂಕ್ ಲಭಿಸಿದೆ. ಇದು ಸಂಸ್ಥೆಯ ರಾಜ್ಯಮಟ್ಟದ ಶ್ರೇಷ್ಠ ಸಾಧನೆಯಾಗಿದೆ.
ಎಸ್ಎಸ್ಎಲ್‌ಸಿ ಪಾಸಾದವರು 3 ವರ್ಷ ಅವಧಿಯ ಪ್ರಯೋಗಾಲಯ ತಂತ್ರಜ್ಞ, ಆಪರೇಶನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ (ಎಕ್ಸ್‌ರೆ) ಟೆಕ್ನಾಲಜಿ, ಹೆಲ್ತ್ ಇನ್ಸ್‌ಪೆಕ್ಟರ್ ಟೆಕ್ನಾಲಜಿ, ಅಪ್ತೋಮೆಟ್ರಿ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ ಮೊದಲಾದ 7 ಕೋರ್ಸ್‌ಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದು.
ಇದರ ಜೊತೆಗೆ ಪಿಯುಸಿ ಪೂರೈಸಿದವರೂ ಈ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದ್ದು, ಪಿಯುಸಿಯಲ್ಲಿ ವಿಜ್ಞಾನ ಅಧ್ಯಯನ ಗೈದ ವಿದ್ಯಾರ್ಥಿಗಳು ನೇರವಾಗಿ 2ನೇ ವರ್ಷಕ್ಕೆ ಪ್ರವೇಶ ಪಡೆದು 2 ವರ್ಷಗಳಲ್ಲೇ ಕೋರ್ಸನ್ನು ಮುಗಿಸಿ ವೃತ್ತಿಗೆ ಸೇರಬಹುದು.
ಪಿಯುಸಿಯಲ್ಲಿ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿರುವವರಿಗೆ ಬಿ. ಎಸ್ಸಿ ಪದವಿಯಲ್ಲಿ ಅನಸ್ತೇಸಿಯಾ ಮತ್ತು ಆಪರೇಶನ್ ಥಿಯೇಟರ್, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ಅಪ್ತೋಮೆಟ್ರಿ ಕೋರ್ಸ್‌ಗಳಲ್ಲದೆ ಸಾರ್ವಜನಿಕ ಆರೋಗ್ಯ, ಆಸ್ಪತ್ರೆ ಆಡಳಿತ ಪದವಿಗಳಿಗೂ ಸೇರಬಹುದು. ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆ ಆಡಳಿತ ಕೋರ್ಸ್‌ಗಳಿಗೆ ವಿಜ್ಞಾನ ವಿದ್ಯಾರ್ಹತೆಯ ಅಗತ್ಯವಿಲ್ಲದ ನೆಲೆಯಲ್ಲಿ ವಾಣಿಜ್ಯ, ಕಲೆ ಮೊದಲಾದವುಗಳನ್ನು ಅಧ್ಯಯನ ಮಾಡಿದವರೂ ಸೇರಬಹುದು. ಈ ಕೋರ್ಸ್‌ಗಳು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಮಾನ್ಯತೆ ಹೊಂದಿವೆ.
3 ವರ್ಷ ಶಿಕ್ಷಣದ ಅನಂತರ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಈ ಎಲ್ಲ ಕೋರ್ಸ್ ಗಳು ರಾಜ್ಯ ಅರೆ ವೈದ್ಯಕೀಯ ಮಂಡಳಿಯಿಂದ ಮಾನ್ಯತೆ ಪಡೆದಿದೆ.
ಈ ಕೋರ್ಸ್‌ಗಳು 3 ವರ್ಷ ಅವಧಿಯಾಗಿದ್ದು, 4ನೇ ವರ್ಷದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಆಸ್ಪತ್ರೆ ಆಡಳಿತ ಕೋರ್ಸ್‌ಗೆ 4ನೇ ವರ್ಷದ ತರಬೇತಿ ಇರುವುದಿಲ್ಲ ಅತ್ಯಲ್ಪ ಶುಲ್ಕವಿರುವ ಇಲ್ಲಿ ಆರ್ಥಿಕ ದುರ್ಬಲರು ಬ್ಯಾಂಕ್ ಗಳ ಸಾಲ ಸೌಲಭ್ಯ, ವಿದ್ಯಾರ್ಥಿವೇತನಗಳಿಂದ ಶಿಕ್ಷಣ ಪಡೆಯಬಹುದು. ಸದಾ ಬೇಡಿಕೆಯಲ್ಲಿರುವ ಅರೆವೈದ್ಯಕೀಯ ಕೋರ್ಸ್‌ಗಳನ್ನು ಪೂರೈಸಿದವರಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ. ಅಸಕ್ತರು ಮಾಹಿತಿಗೆ ಇಮೇಲ್: [email protected] ಸಂಪರ್ಕಿಸಬಹುದು.