ಉಡುಪಿ: ಆದರ್ಶ ನರ್ಸಿಂಗ್ ಕಾಲೇಜಿನಲ್ಲಿ “ತಂಬಾಕು ಮುಕ್ತ ದಿನಾಚರಣೆ”
ಉಡುಪಿ ಜೂ.8(ಉಡುಪಿ ಟೈಮ್ಸ್ ವರದಿ): ಆದರ್ಶ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ತಂಬಾಕು ಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ದ್ವಿತೀಯ ಸೆಮಿಸ್ಟರ್ ನ ಬಿ ಎಸ್ ಸಿ ವಿದ್ಯಾರ್ಥಿಗಳು ಆಯೋಜಿಸಿದ ಈ ಕಾರ್ಯಕ್ರಮವು “ಪ್ರೊಟೆಕ್ಟಿಂಗ್ ಚಿಲ್ಡ್ರನ್ ಫ್ರಮ್ ತೊಬೇಕೊ ಇಂಡಸ್ಟ್ರಿ ಎಂಟರ್ಪ್ರೈಸ್” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆದರ್ಶ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಉಪಾಧ್ಯಕ್ಷೆ ವಿಮಲಾ ಚಂದ್ರಶೇಖರ್ ಹಾಗೂ ಆದರ್ಶ ಆಸ್ಪತ್ರೆಯ ಸಹ ನಿರ್ವಾಹಕ ಡಾ. ಪ್ರಶಾಂತ್, ಆದರ್ಶ ನರ್ಸಿಂಗ್ ಕಾಲೇಜಿನ ಮುಖ್ಯೋಪಾಧ್ಯಾಯರಾದ ಸುಧಿನಾ ಹಾಗೂ ಯಶೋದಾ ಸಾಲಿಯನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಿರು ನಾಟಕ ಪ್ರದರ್ಶನ ನಡೆಯಿತು.