ಮೂಡುಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರತಿಭಾ ಪ್ರದರ್ಶನ ‘ಕಲೋತ್ಸವ-2024’
ಉಡುಪಿ ಜೂ.5(ಉಡುಪಿ ಟೈಮ್ಸ್ ವರದಿ):ಮೂಡುಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ‘ಕಲೋತ್ಸವ-2024’ ಮತ್ತು ಕಾಲೇಜಿನ ವಾರ್ಷಿಕೋತ್ಸವ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ 5 ತಂಡಗಳನ್ನಾಗಿ ವಿಂಗಡಿಸಿದ ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ಕಲಾ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರದರ್ಶನವನ್ನು ನೀಡಿದರು. ಅದ್ಭುತವಾಗಿ ಮೂಡಿ ಬಂದ ಪ್ರತಿಭಾ ಪ್ರದರ್ಶನದಲ್ಲಿ ಯಕ್ಷಗಾನ, ಭರತನಾಟ್ಯ, ಚಂಡೆವಾದನ, ವೀರಗಾಸೆ, ಕಂಗೀಲು, ರಂಗ ಕುಣಿತ, ಸೋಮ ಕುಣಿತ, ಜನಪದ ನೃತ್ಯ, ಕಿರು ನಾಟಕ ಹೀಗೆ ವಿವಿಧ ಕಲಾ ಪ್ರಕಾರಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಗಸ್ತ್ಯ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಅದ್ವೈತ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು. ಚಾಣಕ್ಯ ತಂಡದ ಪ್ರಥಮ ಬಿ ಸಿ ಎ ವಿದ್ಯಾರ್ಥಿನಿ ರಶೀತ ಶೆಟ್ಟಿ ಅತ್ಯುತ್ತಮ ನಿರೂಪಕಿಯಾಗಿ ಮೂಡಿಬಂದರು.
ಜೂನ್ 6 ರಂದು ನೆಡೆದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಂಡಾರ್ಕರ್ಸ್ ಪಿ. ಯು ಕಾಲೇಜಿನ ಪ್ರಾಂಶುಪಾಲಾರದ ಡಾI ಜಿ. ಎಂ. ಗೊಂಡ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿರ್ವದ್ದಿಗೆ ಬೇಕಾದ ಕಾಲೇಜಿನ ಅತ್ಯುತ್ತಮ ಗುಣ ಮಟ್ಟದ ಮೂಲಸೌಕರ್ಯ ಮತ್ತು ಸಂಪನ್ಮೂಲದ ಬಗ್ಗೆ ಪ್ರಶಂಸಸಿದರು. ಹಾಗೂ ಕಲಿಕೆಯ ಜೊತೆ ಕ್ರೀಡೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ ನೀಡುತ್ತಿರುವ ಕಾಲೇಜಿನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಇದರ ಜೊತೆಗೆ ವಿದ್ಯಾರ್ಥಿಗಳು ಅನುಕರಣೆ ಮಾಡುವ ಬದಲಾಗಿ ಪ್ರೇರಣೆ ಪಡೆದು ಆ ಹಾದಿಯನ್ನು ಅನುಸರಿಸುವುದು ಹೆಚ್ಚು ಸೂಕ್ತ ಎಂದು ಪ್ರತಿಪಾದಿಸಿದರು.
ಇನ್ನೊರ್ವ ಅಥಿತಿಯಾಗಿ ಆಗಮಿಸಿದ ಲೆಕ್ಕ ಪರಿಶೋದಕಿ ಮತ್ತು ಪ್ರಸಿದ್ಧ ಕಲಾವಿದೆ ವೃಂದ ಕೊನ್ನಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿಜೀವನದ ವಿಪುಲ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.ಕಲಿಕೆಯ ಜೊತೆ ಕಲೆ ಹೇಗೆ ಜೀವನದಲ್ಲಿ ಉತ್ಸಾಹ ಮತ್ತು ಬದಲಾವಣೆಯನ್ನು ತರಬಲ್ಲದು ಎನ್ನುವುದನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲೆಯಾದ ಡಾI ಪ್ರತಿಭಾ ಎಂ ಪಟೇಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ಈ ವೇಳೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕಾಲೇಜಿಗೆ ಕೀರ್ತಿತಂದ ದ್ವಿತೀಯ ಬಿ ಸಿ ಎ ವಿದ್ಯಾರ್ಥಿ ಸನಿತ್ ಶೆಟ್ಟಿಯನ್ನು ಸನ್ಮಾನಿಸಲಾಯಿತು. ಹಾಗೂ ಶೈಕ್ಷಣಿಕವಾಗಿ ಉತ್ತಮ ಸಾಧನೆಗೈದ ಕಳೆದ ಸೆಮಿಸ್ಟರ್ ನ ಅಂತಿಮ ಪರೀಕ್ಷೆಯಲ್ಲಿ ವಿಷಯವಾರು ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಪ್ರತಿ ತರಗತಿಯ ಟಾಪರ್, ವಿವಿಧ ಕ್ರೀಡಾ, ಸಂಸ್ಕೃತಿಕ ಮತ್ತು ಇತರ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಾಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ ರಾಮಕೃಷ್ಣ ಹೆಗ್ಡೆ , ಕಾಲೇಜಿನ ಉಪಾಪ್ರಾಂಶುಪಾಲಾರದ ಜಯಶೀಲ ಕುಮಾರ್ , ಕನ್ನಡ ಉಪನ್ಯಾಸಕಿ ಸುಮನಾ, ಬಿ ಸಿ ಎ ವಿಭಾಗದ ಮುಖ್ಯಸ್ತೆ ಸ್ವರ್ಣರಾಣಿ, ವಾಣಿಜ್ಯ ಉಪನ್ಯಾಸಕಿ ಅರ್ಚನಾ ಉಪಸ್ಥಿತರಿದ್ದರು