ಮಲ್ಪೆ: ಕಾಪುವಿನಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪಡೆಕೆರೆಯಲ್ಲಿ ಪತ್ತೆ

ಮಲ್ಪೆ ಜೂ.8 (ಉಡುಪಿ ಟೈಮ್ಸ್ ವರದಿ): ಕಾಪುವಿನಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪಡುಕೆರೆ ಶ್ರೀ ದೇವಿ ಭಜನಾ ಮಂದಿರದ ಬಳಿ ಸಮುದ್ರದ ಕಿನಾರೆಯಲ್ಲಿ ಪತ್ತೆಯಾಗಿದೆ.

ಕಾಪುವಿನ ಪಡು ಗ್ರಾಮದ ಕರಣ(20) ಮೃತಪಟ್ಟವರು. ಇವರು ಕಾಪುವಿನಿಂದ ಜೂ.5 ರಂದು ನಾಪತ್ತೆಯಾಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಅವರನ್ನು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿರಲಿಲ್ಲ. ಈ ನಡುವೆ ಜೂ.7 ರಂದು ಪಡುಕೆರೆ ಶ್ರೀ ದೇವಿ ಭಜನಾ ಮಂದಿರದ ಬಳಿ ಸಮುದ್ರದ ಕಿನಾರೆಯಲ್ಲಿ ನಾಪತ್ತೆಯಾಗಿದ್ದ ಕರಣ ಅವರ ಮೃತದೇಹ ಪತ್ತೆಯಾಗಿದೆ.

ಇವರು ಆಕಸ್ಮಿಕವಾಗಿ ಅಥವಾ ಇನ್ಯಾವುದೋ ಕಾರಣದಿಂದ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!