ಬ್ರಹ್ಮಾವರ/ಮಣಿಪಾಲ: ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು 16.29 ಲ.ರೂ ಹಣ ಕಳೆದುಕೊಂಡ ಇಬ್ಬರು

ಬ್ರಹ್ಮಾವರ/ಮಣಿಪಾಲ: ಜೂ.8 (ಉಡುಪಿ ಟೈಮ್ಸ್ ವರದಿ): ಹೂಡಿಕೆ ಮಾಡಿ ಲಾಭಗಳಿಸುವ ಆಸೆ ತೋರಿಸಿದ ಆನ್ಲೈನ್ ವಂಚಕರು ಮತ್ತಿಬ್ಬರಿಗೆ 16.29 ಲ.ರೂ ವಂಚಿಸಿದ್ದಾರೆ.

ಬ್ರಹ್ಮಾವರದ ಕಚ್ಚೂರಿನ ರಾಘವೇಂದ್ರ ಅವರಿಗೆ ಪರಿಚಯದ ಆರೋಪಿ ಮುಂಬೈನ ಸಂತೋಷ್ ಮಹೇಂದ್ರ ಮಹತೋ ಎಂಬಾತ 2022 ರ ಜನವರಿಯಲ್ಲಿ ರಾಘವೇಂದ್ರ ಅವರ ಮನೆಗೆ ಬಂದು ತಾನು ನಡೆಸುತ್ತಿರುವ ರಿಚ್‍ಲೈಪ್‍ಕೇರ್ ಸಂಸ್ಥೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಕೆಲ ಸಮಯದ ನಂತರ ಹೂಡಿಕೆ ಮಾಡಿದ ಹಣದ ಎರೆಡರಷ್ಟು ಮೊತ್ತವನ್ನು ನೀಡುವುದಾಗಿ ತಿಳಿಸಿದ್ದನು. ಇದನ್ನು ನಂಬಿದ ರಾಘವೇಂದ್ರ ಅವರು 2022 ರ ಮೇ 28ರಿಂದ ಅ.18ರ ನಡುವಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ರೂ. 7,00,000/- ಹಣವನ್ನು ಆರೋಪಿತನ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಆದರೆ ಹೂಡಿಕೆ ಮಾಡಿದ ಹಣವನ್ನು ವರ್ಷಗಳು ಕಳೆದರೂ ಆರೋಪಿಯು ವಾಪಾಸ್ಸು ನೀಡದೇ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಮಣಿಪಾಲ ಠಾಣಾ ವ್ಯಾಪ್ತಿಯ ಶ್ರಿಕೊಂಡಾ ಯಶಸ್ವಿನಿ (33) ಇವರಿಗೆ ಅಪರಿಚಿತ ವಾಟ್ಸಾಪ್ ಗ್ರೂಪ್ ನಿಂದ ಲಿಂಕ್‍ವೊಂದನ್ನು ಕಳುಹಿಸಿ ಸ್ಟಾಕ್ ಮಾರ್ಕೆಟ್ ನಲ್ಲಿ ಹಣವನ್ನು ಹೂಡಿಕೆ ಮಾಡಲು ತಿಳಿಸಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಸೂಚಿಸಿದ್ದನು. ಇದನ್ನು ನಂಬಿದ ಶ್ರಿಕೊಂಡಾ ಯಶಸ್ವಿನಿ ಅವರು ಮೇ 6 ರಿಂದ ಜೂ.4ರ ಅವಧಿಯಲ್ಲಿ ಒಟ್ಟು ರೂ. 9,29,000/- ರೂಪಾಯಿ ಹಣವನ್ನು ಆರೋಪಿಯ ಬೇರೆ ಬೇರೆ ಖಾತೆಗೆ ಜಮಾ ಮಾಡಿರುತ್ತಾರೆ. ಆದರೆ ಆರೋಪಿ ಹಣವನ್ನು ನೀಡದೇ ವಂಚಿಸಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!