ಉಡುಪಿ: ತಾ.ಕಚೇರಿ ಲಿಫ್ಟ್ ಬಂದ್- ಅವ್ಯವಸ್ಥೆಗೆ ಸಾರ್ವಜನಿಕರಿಂದ ಹಿಡಿ ಶಾಪ

ಉಡುಪಿ ಜೂ.6 (ಉಡುಪಿ ಟೈಮ್ಸ್ ವರದಿ): ಬನ್ನಂಜೆ ಯಲ್ಲಿರುವ ತಾಲೂಕು ಕಚೇರಿ ಕಟ್ಟಡ ಸಂಕೀರ್ಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ನಾಲ್ಕು ಮಂದಿ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡು, ಅಸಹಾಯಕತೆಯಿಂದ ಅರ್ಧ ಗಂಟೆಗಳ ಕಾಲ ಪರದಾಡಿದ ಆತಂಕಕಾರಿ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಇಂಧನ ಇಲ್ಲದೆ, ತುರ್ತು ನಿರ್ಗಮನ ವ್ಯವಸ್ಥೆಯು ಇಲ್ಲದೆ ಲಿಫ್ಟ್ ನಲ್ಲಿದ್ದ ಜನತೆ ಆತಂಕಕ್ಕೀಡಾಗಿದ್ದರು. ಲಿಫ್ಟನ ನಿರ್ವಹಣೆ ಮತ್ತು ಮೇಲುಸ್ತುವಾರಿಯ ಜವಾಬ್ದಾರಿ ಸರಿಯಾಗಿ ನಿರ್ವಹಿಸದೆ ಇರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ ಎಂದು ತಾಲೂಕು ಆಡಳಿತಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.

ಸರಕಾರಿ ಕೆಲಸ ಕಾರ್ಯಗಳಿಗೆಂದು ಬರುವ ಜನತೆ ಬೆಳಿಗ್ಗೆನಿಂದ ಸಾಯಂಕಾಲದ ವರೆಗೆ ಲಿಫ್ಟ್ ವ್ಯವಸ್ಥೆಯನ್ನು ಬಳಸುತ್ತಿದ್ದು, ಆಕಸ್ಮಿಕವಾಗಿ ಏನಾದರೂ ತಾಂತ್ರಿಕ ತೊಂದರೆ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಲಿಫ್ಟ್ ನ ಒಳಗಿದ್ದವರಿಗೆ ಏನೂ ಮಾಡಲೂ ತೋಚದೆ ಭಯಭೀತರಾಗಿ ಕಾಲ ಕಳೆಯುವ ಸನ್ನಿವೇಶ ಸೃಷ್ಟಿಯಾಗಿದೆ.

ಈ ಬಗ್ಗೆ ಘಟನೆಯಿಂದ ಲಿಫ್ಟ್ ನಲ್ಲಿ ತೊಂದರೆಗೊಳಗಾದ ಮೂಡಬಿದ್ರೆಯ ವಿಶ್ವಕುಮಾರ್ ಭಟ್‍ರವರು ಉಡುಪಿ ತಹಶೀಲ್ದಾರ್ ಅವರಿಗೆ ಲಿಖಿತ ದೂರು ನೀಡಿ, ಕೂಡಲೇ ಲಿಫ್ಟ್ ನಿರ್ವಹಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಮುಂದೆ ಎಂದೂ ಇಂತಹ ದುರ್ಘಟನೆ ನಡೆಯದ ಹಾಗೆ ಎಚ್ಚರಿಕೆ ವಹಿಸುವುದು ತೀರಾ ಅಗತ್ಯ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!