ಬೈಂದೂರು: ಶ್ರೀರಾಮ್ ಫೈನಾನ್ಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ
ಬೈಂದೂರು ಜ.23(ಉಡುಪಿ ಟೈಮ್ಸ್ ವರದಿ): ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಇದರ ಬೈಂದೂರ್ ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಶ್ರೀರಾಮ್ ಫೈನಾನ್ಸ್‍ನ ಉಡುಪಿ ಕ್ಲಸ್ಟರ್ ಹೆಡ್ ಸದಾಶಿವ ಅಮೀನ್ ಕಟ್ಟೆಗುಡ್ಡೆ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸುಮಾರು 130 ವಿದ್ಯಾರ್ಥಿಗಳಿಗೆ ತಲಾ 3500 ರೂ ನಂತೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪುಂದದ ಮೂರ್ತೆ ದಾರರ ಸೇವಾ ವ್ಯವಸಾಯ ಸಹಕಾರಿ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ಬೈಂದೂರಿನ ಎಸ್.ಎಸ್.ವಿ ಹೀರೋ ಮೋಟರ್ಸ್‍ನ ಶ್ರೀ ಕೃಷ್ಣ ಮದ್ದೋಡಿ, ಭಟ್ಕಳದ ವಕೀಲರಾದ ರಾಮಚಂದ್ರ ನಾಯ್ಕ್, ಬೈಂದೂರಿನ ಎಕೆ ರೆಸಿಡೆನ್ಸಿಯ ಮಾಲಕರಾದ ತಮಸಿರ್, ಶ್ರೀರಾಮ್ ಫೈನಾನ್ಸ್ ಉಡುಪಿ ಇದರ ಗಣಪತಿ ನಾಯ್ಕ್, ಉಡುಪಿಯ ಕ್ಲಸ್ಟರ್ ಸೇಲ್ಸ್ ಹೆಡ್ ಸದಾನಂದ ಪೈ, ರಿಜಿನಲ್ ಹೆಡ್ ಸುರೇಶ್ ಶೆಟ್ಟಿ, ಹಾಗೂ ಸತೀಶ್ ಪೂಜಾರಿ ಉಜಿರೆ, ಶಾಖಾ ವ್ಯವಸ್ಥಾಪಕರಾದ ಮಹೇಶ್ ಪೂಜಾರಿ, ಕರುಣಾಕರ ಕೆ., ಭಟ್ಕಳ ಶಾಖಾ ವ್ಯವಸ್ಥಾಪಕರಾದ ರಾಘವೇಂದ್ರ ಸ್ವಾಮಿ ಮೊದಲಾದವರು ಉಪಸ್ಥಿತತರಿದ್ದರು.