ಹಿರಿಯಡ್ಕ: 2.88 ಲ.ರೂ ಮೌಲ್ಯದ ಚಿನ್ನಾಭರಣ ಕಳವು- ಮನೆ ಕೆಲಸದ ವ್ಯಕ್ತಿ ಮೇಲೆ ಶಂಕೆ
ಹಿರಿಯಡ್ಕ ಜೂ.5(ಉಡುಪಿ ಟೈಮ್ಸ್ ವರದಿ): ಮನೆಯ ಕೋಣೆಯಲ್ಲಿ ಇಟ್ಟಿದ್ದ 2.88 ಲ.ರೂ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಮನೆಯ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇಲೆ ಶಂಕೆ ವ್ಯಕ್ತಪಡಿಸಿ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಪದ್ಮಶ್ರೀ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮೇ 27 ರಂದು ಮನೆಯಲ್ಲಿ ನೋಡಿದಾಗ ಚಿನ್ನದ ಸರದ ಬಾಕ್ಸ್‌ನಲ್ಲಿ ಚಿನ್ನಾಭರಣಗಳು ಇರುವುದು ಕಂಡು ಬಂದಿತ್ಯು. ಆದರೆ ಮರುದಿನ ಬಾಕ್ಸ್‌ನಲ್ಲಿ ಇದ್ದ 2,88,000 ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಚಿನ್ನಾಭರಣಗಳನ್ನು ಮನೆಯ ಕೆಲಸಕ್ಕೆ ಬರುತ್ತಿದ್ದ ಸಂತೋಷ್ ಅಥಾವ ಇನ್ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.