ಉಡುಪಿ: ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಆರೋಪಿತರ ಪರೇಡ್
ಉಡುಪಿ (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾದ ಆರೋಪಿತರ ಪರೇಡ್ ಅ 28 ರಂದು ನಗರದ ಚಂದು ಮೈದಾನದಲ್ಲಿ ನಡೆಯಿತು.
ಪರೇಡ್ ನಲ್ಲಿಯೋ ಭಾಗವಹಿಸಿದ ಆರೋಪಿತರನ್ನು ಉದ್ದೇಶಿಸಿ ಪೊಲೀಸ್ ವರಿಷ್ಠಾಧಿಕಾರಿ ಏನ್ ವಿಷ್ಣುವರ್ಧನ್ ಮಾತನಾಡಿ ಸಮಾಜ ಸ್ವಸ್ಥ ಕಾಪಾಡುವ ನಿಟ್ಟನಲ್ಲಿ ಇನ್ನು ಮುಂದೆ ಇಂತಹ ಸಮಾಜ ಘಾತಕ ಕ್ರತ್ಯಗಳನ್ನು ನಡೆಸದಂತೆ ಹಾಗು ಇದನ್ನು ಮುಂದುವರೆಸಿಕೊಂಡು ಹೋದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಅಷ್ಟೇ ಅಲ್ಲದೆ ಮಾದಕ ದ್ರವ್ಯ ಸಾಗಿಸುವ ಹಾಗು ಮಾರಾಟ ಮಾಡುವವರ ಕುರಿತು ಮಾಹಿತಿ ನೀಡಿದವರ ಹೆಸರು ವಿಳಾಸವನ್ನ ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಪರೇಡ್ ನಲ್ಲಿ ಬೈಂದೂರು , ಕುಂದಾಪುರ, ಕೋಟ , ಕುಂದಾಪುರ ಗ್ರಾಮಾಂತರ, ಮಲ್ಪೆ, ಮಣಿಪಾಲ,ಸೆನ್, ಕಾಪು, ಕಾರ್ಕಳ , ಪಡುಬಿದ್ರೆ ಹಾಗು ಹಿರಿಯಡಕ ಠಾಣೆಯಿಂದ ಸುಮಾರು 78 ಜನ ಆರೋಪಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಪೊಲೀಸ್ ಉಪವಿಭಾಧಿಕಾರಿ ಟಿ ಆರ್ ಜೈ ಶಂಕರ್, ಸಶಸ್ತ್ರ ಮೀಸಲು ಪಡೆಯ ಡಿ .ವೈ.ಎಸ್.ಪಿ ರಾಘವೇಂದ್ರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕರಾದ ಮಂಜುನಾಥ್ ಹಾಗು ವಿವಿಧ ಠಾಣೆಯ ಪೊಲೀಸ್ ಉಪನಿರೀಕ್ಷಕರು ಉಪಸ್ಥಿತರಿದ್ದರು.