ಕಾಪು: ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಕಾಪು ಜೂ.05 (ಉಡುಪಿ ಟೈಮ್ಸ್ ವರದಿ): ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ರಭಸಕ್ಕೆ ದೋಣಿ ಅಲುಗಾಡಿದ ಪರಿಣಾಮ ಮೀನುಗಾರರೊಬ್ಬರು ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಕಾಪುವಿನ ಪಾಪನಾಶಿನಿ ನದಿಯಲ್ಲಿ ನಡೆದಿದೆ.

ಮೃತರನ್ನು ಪಿತ್ರೋಡಿಯ ನಿವಾಸಿ ಗೋವರ್ಧನ್ (62) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಿಗ್ಗೆ ಲೀಲಾಧರ ಎಂಬವರ ಮಾಲಕತ್ವದ ಸಂಪ್ರದಾಯಿಕ ನಾಡದೋಣಿಯಲ್ಲಿ ಉದ್ಯಾವರ ಗ್ರಾಮದ ಪಿತ್ರೋಡಿಯಿಂದ ಪಾಪನಾಶಿನಿ ನದಿಯಲ್ಲಿ ಮೀನುಗಾರಿಕೆಗೆಂದು ಹೊರಟಿದ್ದರು. ಈ ವೇಳೆ ಮೀನುಗಾರಿಕೆ ನಡೆಸುತ್ತಿದ್ದಾಗ ಅಲೆಗಳ ರಭಸಕ್ಕೆ ದೋಣಿ ಅಲುಗಾಡಿದಾಗ ದೋಣಿಯಲ್ಲಿದ್ದ ಗೋವರ್ಧನ್‍ರವರು ಆಯತಪ್ಪಿ ಪಾಪನಾಶಿನಿ ನದಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದರು. ತಕ್ಷಣ ಅವರಿಗಾಗಿ ಹುಡುಕಾಟ ನಡೆಸುತ್ತಿರುವಾಗ ನದಿಯಲ್ಲಿ ಗೋವರ್ಧನ್‍ರವರ ಮೃತ ದೇಹ ಪತ್ತೆಯಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!