ಮಂಗಳೂರು: ತೌಸೀಫ್ ಅಹಮ್ಮದ್‍ಗೆ “ಇಂಟರ್ ನ್ಯಾಶನಲ್ ಐಕಾನಿಕ್ ಎನಿಮಲ್ ರೆಸ್ಕ್ಯೂ ಹೀರೋ” ಪುರಸ್ಕಾರ

ಮಂಗಳೂರು ಜೂ.5 (ಉಡುಪಿ ಟೈಮ್ಸ್ ವರದಿ): ರಸ್ತೆ ಬದಿಯಲ್ಲಿರುವ ಪ್ರಾಣಿಗನ್ನು ರಕ್ಷಣೆ ಮಾಡುತ್ತಾ ಬರುತ್ತಿರುವ
ಮಂಗಳೂರು ಮೂಲದ ತೌಸೀಫ್ ಅಹಮ್ಮದ್ ಅವರಿಗೆ “2024ನೇಸಾಲಿನ ಇಂಟರ್ ನ್ಯಾಶನಲ್ ಐಕಾನಿಕ್ ಎನಿಮಲ್ ರೆಸ್ಕ್ಯೂ ಹೀರೋ” ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಮಂಗಳೂರು ಮೂಲದ ಎಂ.ಬಿ.ಎ. ಪದವೀಧರರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಿಯಾಗಿರುವ ತೌಸೀಫ್ ಅಹಮದ್ ಅವರು ಪ್ರಾಣಿ ಪ್ರಿಯರಾಗಿದ್ದು, ಕಳೆದ 14 ವರ್ಷಗಳಿಂದ ಮಂಗಳೂರು ನಗರದಲ್ಲಿ ಬೀದಿಯ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಮೇ 28 ರಂದು ಮುಂಬೈನಲ್ಲಿ ನಡೆದ ಇಂಟರ್’ನ್ಯಾಶನಲ್ ಐಕಾನಿಕ್ ಅವಾಡ್ರ್ಸ್ ಸೀಸನ್ 10 ಕಾರ್ಯಕ್ರಮದಲ್ಲಿ “2024ನೇ ಸಾಲಿನ ಇಂಟರ್ ’ನ್ಯಾಶನಲ್ ಐಕಾನಿಕ್ ಎನಿಮಲ್ ರೆಸ್ಕ್ಯೂ ಹೀರೋ” ಎಂಬ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಪ್ಯಾರವೆಟ್ ತರಬೇತಿ ಪಡೆದ ತೌಸೀಫ್ ಅವರು ತಮ್ಮ ಜೀವನದ ಉದ್ದೇಶವೇ ಪ್ರಾಣಿ ರಕ್ಷಣೆ ಎಂದು ನಂಬಿ ಇದುವರೆಗೆ 18,000ಕ್ಕೂ ಹೆಚ್ಚು ಪ್ರಾಣಿಗಳನ್ನು, 6,000ಕ್ಕೂ ಹೆಚ್ಚು ಹಾವುಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ರಕ್ಷಿಸಿ, ಚಿಕಿತ್ಸೆನೀಡಿ ಪುನರ್ವಸತಿಗೊಳಿಸಿದ್ದಾರೆ.

ಎನ್.ಜಿ.ಒ ತಂಡ ಅಥವಾ ಆ್ಯಂಬುಲೆನ್ಸ್ ಇಲ್ಲದಿದ್ದರೂ, ಒಬ್ಬಂಟಿಯಾಗಿ ಈ ಮೂಕ ಪ್ರಾಣಿಗಳ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ತೌಸೀಫ್ ಬೀದಿಯಲ್ಲಿ ಬದುಕಲು ಅಸಮರ್ಥ ಪ್ರಾಣಿಗಳಿಗೆ ಆಶ್ರಯ ಕಟ್ಟುವ ಉದ್ದೇಶದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!