ಉಡುಪಿ: ರೆಫ್ರಿಜರೇಟರ್ ದುರಸ್ತಿ ವೇಳೆ ವಿದ್ಯುತ್ ಶಾಕ್- ಎಲೆಕ್ಟ್ರಿಷಿಯನ್ ಮೃತ್ಯು
ಉಡುಪಿ, ಜೂ.3: ಇಲ್ಲಿನ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀದ ಹೊಟೇಲೊಂದರಲ್ಲಿ ರೆಫ್ರಿಜರೇಟರ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ಎಲೆಕ್ಟ್ರಿಷಿಯನ್ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು 76 ಬಡಗಬೆಟ್ಟುವಿನ ಬೈಲೂರು ಬಿ.ಬಿ.ನಗರ ನಿವಾಸಿ ಗಿರೀಶ್ ಶೇರಿಗಾರ್(45) ಎಂದು ಗುರುತಿಸಲಾಗಿದೆ. ಇವರು ಸುಮಾರು 25 ವರ್ಷ ಗಳಿಂದ ಎಲೆಕ್ಟ್ರಿಷಿಯನ್ ಹಾಗೂ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ ಮಥುರಾ ಕಂಫರ್ಟ್ಸ್ ಹೋಟೆಲ್ಗೆ ರೆಫ್ರಿಜರೇಟರ್ ಪರಿಶೀಲನೆ ಮಾಡಲು ಬಂದಿದ್ದ ಇವರು, ರೆಫ್ರಿಜರೇಟರ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.