ಮಣಿಪಾಲ: ಖ್ಯಾತಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸಕ ಡಾ. ಪ್ರತಾಪ್ ಕುಮಾರ್ ಅವರ ಸೇವೆ ಇಂದಿನಿಂದ ಕೆಎಂಸಿಯಲ್ಲಿ ಲಭ್ಯ
ಮಣಿಪಾಲ ಜೂ. 3(ಉಡುಪಿ ಟೈಮ್ಸ್ ವರದಿ): ಖ್ಯಾತ ಸಂತಾನೋತ್ಪತ್ತಿ ಔಷಧಿ ತಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಪ್ರತಾಪ್ ಕುಮಾರ್ ಎನ್ ಅವರು ಇನ್ನು ಮುಂದೆ ಪೂರ್ಣ ಸಮಯಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿರಲಿದ್ದಾರೆ.
ಇವರು ಇಂದಿನಿಂದ ಕೆಎಂಸಿಯ ಡಾ. ರಾಮದಾಸ್ ಪೈ ಬ್ಲಾಕ್‌ನಲ್ಲಿ ಸಮಾಲೋಚನೆಗಾಗಿ ಪೂರ್ವ ನಿಗದಿ (ಅಪ್ಪೋಯಿಂಟ್ಮೆಂಟ್) ಮೂಲಕ ತಮ್ಮ ಪರಿಣಿತ ಸೇವೆಗಳನ್ನು ನೀಡಲಿದ್ದಾರೆ.
ತಮ್ಮ ಅಸಾಧಾರಣ ಪರಿಣತಿ ಮತ್ತು ಸಹಾನುಭೂತಿಯ ಆರೈಕೆಗಾಗಿ ಗುರುತಿಸಲ್ಪಟ್ಟಿರುವ ಡಾ. ಪ್ರತಾಪ್ ಕುಮಾರ್ ಅವರು ಟೆಸ್ಟ್ ಟ್ಯೂಬ್ ಬೇಬಿ (ಐ ವಿ ಎಫ್) ಕಾರ್ಯವಿಧಾನಗಳಲ್ಲಿ ತಮ್ಮ ವಿಶೇಷ ಕೌಶಲ್ಯಗಳ ಮೂಲಕ 10,000 ಕ್ಕೂ ಹೆಚ್ಚು ಶಿಶುಗಳ ಜನನವನ್ನು ಸುಗಮಗೊಳಿಸಿರುವ ಗಮನಾರ್ಹ ದಾಖಲೆಯನ್ನು ಹೊಂದಿದ್ದಾರೆ.
ಇವರು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9:00 ಮಧ್ಯಾಹ್ನ 12:00 ಗಂಟೆ ವರೆಗೆ ಮತ್ತು ಮಧ್ಯಾಹ್ನ 3:00 ಗಂಟೆಯಿಂದ ಸಂಜೆ 4:00 ಗಂಟೆ ವರೆಗೆ ಪೂರ್ವ ನಿಗದಿ (ಅಪ್ಪೋಯಿಂಟ್ಮೆಂಟ್) ಮೂಲಕ ಡಾ. ಪ್ರತಾಪ್ ಕುಮಾರ್ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ.
ಸಮಯ ನಿಗದಿಪಡಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ ದೂ.ಸಂ 6364469750, ವೆಬ್‌ಸೈಟ್: www.khmanipal.com ವೆಬ್ಸೈಟ್‌ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.