ಉಡುಪಿ: ವಿದೇಶದಲ್ಲಿ ಉದ್ಯೋಗದ ಆಮಿಷ- ಮಹಿಳೆಗೆ ವಂಚನೆ
ಉಡುಪಿ ಜೂ.1 (ಉಡುಪಿ ಟೈಮ್ಸ್ ವರದಿ): ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುಷ್ಪಾ ಎಂಬವರು ವಿದೇಶದಲ್ಲಿ ಉದ್ಯೋಗ ಪಡೆಯಲು ವೆಬ್ಸೈಟ್‌ವೊಂದರಲ್ಲಿ ನಲ್ಲಿ ಆನ್ ಲೈನ್ ಮುಖೇನಾ ಅರ್ಜಿ ಸಲ್ಲಿಸಿದ್ದರು. ಆ ಬಳಿಕ ಮೊಬೈಲ್ ಗೆ ಈ-ಮೇಲ್ ಸಂದೇಶ ಬಂದಿದ್ದು ಸಂದೇಶದಲ್ಲಿರುವ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಆರೋಪಿಗಳು ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ವೀಸಾ ಪ್ರೋಸೆಸ್, ಮೆಡಿಕಲ್ ಫಿಟ್‌ನೆಸ್ ಮುಂತಾದ ಕಾರಣ ನೀಡಿ ಕ್ಯೂ ಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮುಖೇನಾ ಹಂತವಾಗಿ ಒಟ್ಟು ರೂ. 80,070/- ಹಣವನ್ನು ಆನ್ ಲೈನ್ ಮುಖೇನಾ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಆದರೆ ಬಳಿಕ ಆರೋಪಿಗಳು ವಿದೇಶದಲ್ಲಿ ಉದ್ಯೋಗವನ್ನು ನೀಡದೇ, ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.