ಉಡುಪಿ: ಹೂಡಿಕೆ ಆಮಿಷ- ಆನ್ಲೈನ್ ವಂಚಕರ ಬಲೆಗೆ ಮತ್ತಿಬ್ಬರು ಬಲಿ
ಉಡುಪಿ ಮೇ 31 (ಉಡುಪಿ ಟೈಮ್ಸ್ ವರದಿ): ಹೋಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಸೆ ತೋರಿಸಿ ಉಡುಪಿಯ ಮತ್ತಿಬ್ಬರಿಂದ ಆನ್ಲೈನ್ ವಂಚಕರು 5.01 ಲ.ರೂ ದೋಚಿ ವಂಚಿಸಿರುವ ಬಗ್ಗೆ ಉಡುಪಿ ನಗರ ಮತ್ತು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿಯ ನರಸಿಂಹ ಎಂಬವರಿಗೆ ಅಪರಿಚಿತ ವ್ಯಕ್ತಿ ಟ್ರೆಡೀಂಗ್ ವ್ಯವಹಾರದ ಬಗ್ಗೆ ಲಿಂಕ್ ಕಳುಹಿಸಿ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದನು ಇದನ್ನು ನಂಬಿದ ನರಸಿಂಹ ಅವರು, ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ. 1,88,800/- ಹಣವನ್ನು ಡಿಪಾಸಿಟ್ ಮಾಡಿದ್ದರು. ಆದರೆ ಆರೋಪಿಗಳು ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ ವಂಚಿಸಿದ್ದಾರೆ. ಇದೇ ರೀತಿ ಉಡುಪಿಯ ಹೇಮ ಪ್ರಕಾಶ್ ಇವರಿಗೂ ಅಪರಿಚಿತ ವ್ಯಕ್ತಿಗಳು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುವುದಾಗಿ ನಂಬಿಸಿ ಒಟ್ಟು ರೂ. 3,12,970/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಈ ಎರಡೂ ದೂರಿಗೆ ಸಂಬಂಧಿಸಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಹಾಗೂ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ತಲಾ ಒಂದರಂತೆ ಪ್ರತ್ಯೇಕ 2 ಪ್ರಕರಣ ದಾಖಲಾಗಿದೆ.