ಮಣಿಪಾಲ: ವಿಶ್ವ ತಂಬಾಕು ರಹಿತ ದಿನ- ಕೆಎಂಸಿಯಿಂದ ವಿಶೇಷ ಕಲಾಕೃತಿ ಅನಾವರಣ

ಮಣಿಪಾಲ ಮೇ 31(ಉಡುಪಿ ಟೈಮ್ಸ್ ವರದಿ): ವಿಶ್ವ ತಂಬಾಕು ರಹಿತ ದಿನ -2024 ಇದರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಇದರ ಸಹಯೋಗದೊಂದಿಗೆ  ರಚಿಸಿದ ಕಲಾಕೃತಿಯನ್ನು ಕೆ ಎಮ್ ಸಿ ಯ ಅಸೋಸಿಯೆಟ್ ಡಿನ್ ಡಾ.ಕೃಷ್ಣಾನಂದ ಪ್ರಭು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಅನಾವರಣಗೊಳಿಸಿದರು.

ಈ ವೇಳೆ ಸಮುದಾಯ ವೈದ್ಯಕೀಯ ವಿಭಾಗದ ಪ್ರಾದ್ಯಾಪಕ ಡಾ ಮುರಳೀಧರ್ ಕುಲಕರ್ಣಿ ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿಹಿರೆಬೆಟ್ಟು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯ ಬಗ್ಗೆ ವಿವರಿಸಿದರು.

ತಂಬಾಕಿನ ಸೇವನೆಯಿಂದಾಗಿ ಪ್ರತಿವರ್ಷ 8 ಮಿಲಿಯನ್  ಜನರು ಸಾವನ್ನಪ್ಪುತ್ತಿರುವುದು ದುಖ:ಕರ ವಿಷಯವಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಲಾಕೃತಿಯನ್ನು ಒಂದು ವಾರಗಳ ಕಾಲ ಮಣಿಪಾಲ ಮತ್ತು ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾವುದು ಎಂದು ಕಲಾವಿದರು ತಿಳಿಸಿದ್ದಾರೆ.

ಸಮುದಾಯ ವೈದ್ಯಕೀಯ ವಿಭಾಗದ ಡಾ ವೀನಾ ಕಾಮತ್, ಡಾ ಚೈತ್ರಾ ರಾವ್, ಡಾ ಸ್ನೇಹಾ ಕಾಮತ್, ಡಾ ಈಶ್ವರಿ,  ಡಾ ಯಶ್, ಡಾ ಅಖಿಲಾ,ಡಾ ಮಂಜುಳ, ಡಾ ಅರುಣ್‌ದಾಸ್, ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಲಾಕೃತಿಯಲ್ಲಿ – ತಂಬಾಕು ಉದ್ಯಮವು ಯುವಜನತೆಯನ್ನು ಯಾವ ರೀತಿ ತನ್ನ ಆಮಿಷಕ್ಕೆ ಒಳಪಡಿಸುತ್ತಿದೆ ಎಂಬುದನ್ನು ಭಯಾನಕವಾಗಿ ಬಿಂಬಿಸಲಾಗಿದೆ. 

Leave a Reply

Your email address will not be published. Required fields are marked *

error: Content is protected !!