ಉಡುಪಿ: ಬಾರ್‌ನಲ್ಲಿ 1.20 ಲ.ರೂ. ಕಳ್ಳತನ

ಉಡುಪಿ ಮೇ 30(ಉಡುಪಿ ಟೈಮ್ಸ್ ವರದಿ): ಪುತ್ತೂರು ಗ್ರಾಮದ ಅಂಬಾಗಿಲಿನಲ್ಲಿರುವ ಬಾರ್‌ವೊಂದಕ್ಕೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್‌ನಲ್ಲಿ ಇಟ್ಟಿದ್ದ 1.20 ಲ.ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಅಂಬಾಗಿಲಿನಲ್ಲಿರುವ ಬಾರ್ ನಲ್ಲಿ ಕ್ಯಾಶಿಯರ್ ಆಗಿದ್ದ ವಸಂತ ಅವರು ನಿನ್ನೆ ರಾತ್ತಿ  ಕೆಲಸ ಮುಗಿಸಿ ಬಾರ್  ಬಂದ್ ಮಾಡಿ ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಬಾರ್‌ಗೆ ಅಡುಗೆ ಕೆಲಸಕ್ಕೆಂದು ಬಂದವರು ಬಾರ್‌ನ ಶೆಟರ್ ಮಧ್ಯದಲ್ಲಿ ತೆರೆದಿರುವುದು ಕಂಡು ವಸಂತ ಅವರಿಗೆ ತಿಳಿಸಿದಂತೆ ವಸಂತ ಅವರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಶಟರ್ ನ ಮದ್ಯದಲ್ಲಿ ಮೇಲಕ್ಕೆ ಎತ್ತಿ ಒಳ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ್ದ ರೂ. 1,20,000/- ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!