ಉಡುಪಿ: ಪ್ರಸಾದ್ ನೇತ್ರಾಲಯಕ್ಕೆ ವಿಧಾನ ಸಭಾ ಉಪಸಭಾಪತಿ ರುದ್ರಪ್ಪ ಎಂ. ಲಮಾಣಿ ಭೇಟಿ

ಉಡುಪಿ ಮೇ 28(ಉಡುಪಿ ಟೈಮ್ಸ್ ವರದಿ): ಕರ್ನಾಟಕ ರಾಜ್ಯ ವಿಧಾನ ಸಭೆಯ ಉಪ ಸಭಾಪತಿಯಾದಂತಹ ರುದ್ರಪ್ಪ ಎಂ. ಲಮಾಣಿಯವರು ಉಡುಪಿಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯಕ್ಕೆ ಭೇಟಿ ನೀಡಿದರು.

ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಉಪ ಸಭಾಪತಿಯಾದಂತಹ ರುದ್ರಪ್ಪ ಎಂ. ಲಮಾಣಿ ಅವರನ್ನು ಬರಮಾಡಿಕೊಂಡರು.

ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಸಾಮಾಜಿಕ ಚಟುವಟಿಕೆಗಳ ಮಾಹಿತಿಯನ್ನು ಪಡೆದುಕೊಂಡ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪ ಸಭಾಪತಿಯಾದಂತಹ ರುದ್ರಪ್ಪ ಎಂ. ಲಮಾಣಿ ಅವರೊಂದಿಗೆ ಅವರ ಪತ್ನಿ ಮಂಜುಳ ಅವರು ಜೊತೆಗಿದ್ದರು.

Leave a Reply

Your email address will not be published. Required fields are marked *

error: Content is protected !!