ಪಾತ್ರಧಾರಿಗಳ ಬಗ್ಗೆ ಮಾತ್ರ ಮಾತು ಸೂತ್ರಧಾರಿಗಳ ಬಗ್ಗೆ ಏಕೆ ಮೌನ ? :ತೇಜಸ್ವಿ ಸೂರ್ಯಗೆ ಅಮೃತ್ ಶೆಣೈ ಪ್ರಶ್ನೆ
ಉಡುಪಿ ಮೇ.6( ಉಡುಪಿ ಟೈಮ್ಸ್ ವರದಿ): ಬೆಡ್ ಹಗರಣ ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು ,ಸರಕಾರದ ಮಂತ್ರಿಗಳ ಸಹಕಾರ ಇಲ್ಲದೇ ಸುಲಭದಲ್ಲಿ ಮಾಡೋಕಾಗುತ್ತಾ ? ಎಂದು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಅವರು ಸಂಸದ ತೇಜಸ್ವಿ ಸೂರ್ಯ ಅವರನ್ನು ಕೇಳಿದ್ದಾರೆ.
ಬೆಡ್ ಹಗರಣಕ್ಕೆ ಸಂಬಂಧಿಸಿದಂತೆ ತೇಜಸ್ವಿಯವರ ಕಾರ್ಯಾಚರಣೆ ಯ ಬಗ್ಗೆ ಸಂಶಯ ಹಾಗೂ ಅಸಮಾಧಾನವನ್ನು ವ್ಯಕ್ತಪಡಿಸಿರುವ ಅಮೃತ್ ಶೆಣೈಯವರು ತೇಜಸ್ವಿ ಸೂರ್ಯರೇ, ಪಾತ್ರಧಾರಿಗಳ ಬಗ್ಗೆ ಮಾತ್ರ ಮಾತು ಸೂತ್ರಧಾರಿಗಳ ಬಗ್ಗೆ ಏಕೆ ಮೌನ ? ಎಂದು ಪ್ರಶ್ನಿಸಿದ್ದಾರೆ.
ಬೊಮ್ಮನಹಳ್ಳಿ ಶಾಸಕರ ಮೇಲೆ ಆರೋಪ ಕೇಳಿ ಬಂದಿರುವ ವಿಚಾರವಾಗಿ ಮಾತನಾಡಿದ ಅವರು ಈಗ ಏನು ಹೇಳುತ್ತೀರಿ ?ಆರೋಗ್ಯ ಸಚಿವರ ವೈಫಲ್ಯವಲ್ಲವೇ ಇದು ,ವ್ಯವಸ್ಥೆ ಬಗ್ಗೆ ಕನಿಷ್ಠ ತಿಳುವಳಿಕೆ ಇದ್ದವರಿಗೆ, ಅಧಿಕಾರಿಗಳು ದಾರಿ ತಪ್ಪಿದರೆ ನೇರಹೊಣೆ ಇಲಾಖಾ ಮುಖ್ಯಸ್ಥ ರಾದ ಮಂತ್ರಿ ಗಳು ಹಾಗೂ ಮುಖ್ಯ ಮಂತ್ರಿಗಳು ಎಂದು ಗೊತ್ತಿದೆ. ಜನರನ್ನು ಮೂರ್ಖರೆಂದು ತಿಳಿದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಎಮ್ ಪಿ ಆಗಿರುವ ತಾವು ತಮ್ಮ ಅಧಿಕಾರವನ್ನು ದೆಹಲಿಗೆ ಹೋಗಿ ಕೇಂದ್ರ ಸರಕಾರದ ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದು ರಾಜ್ಯಕ್ಕೆ ಆಕ್ಸಿಜನ್ ,ವ್ಯಾಕ್ಸಿನ್ ವಿಷಯ ದಲ್ಲಿ ಆಗುತ್ತಿರುವ ಅನ್ಯಾಯವನ್ನು ಬಗೆಹರಿಸಲು ಬಳಸಿ ಎಂದು ಅಮೃತ್ ಶೆಣೈ ಅವರು ಸಂಸದ ತೇಜಸ್ವಿ ಸೂರ್ಯ ಅವರಿಗೆ ಸಲಹೆ ನೀಡಿದ್ದಾರೆ.