ಬ್ರಹ್ಮಾವರ:ದಶಕಕ್ಕಿಂತಲೂ ಹಳೇ ತುಕ್ಕು ಹಿಡಿದ ಟ್ರಾನ್ಸ್‌ಫಾರ್ಮರ್- ಗ್ರಾಮಸ್ಥರಲ್ಲಿ ಆತಂಕ
ಬ್ರಹ್ಮಾವರ ಮೇ 27: ದಶಕಗಳ ಹಿಂದೆ ನಿರ್ಮಿಸಿರುವ ಬ್ರಹ್ಮಾವರದ ಮಟಪಾಡಿಯ ಈ ತುಕ್ಕು ಹಿಡಿದಿರುವ ಟ್ರಾನ್ಸ್ ಫಾರ್ಪಮರ್ ಇದೀಗ ಮಳೆಗಾಲದಲ್ಲಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲಿ ಶ್ರೀನಿಕೇತನ ಪ್ರೌಢಶಾಲೆ ಮತ್ತು ಅಂಗನವಾಡಿ ಕೇಂದ್ರ ಇದ್ದು, ಇದು ವಿದ್ಯಾರ್ಥಿಗಳು ಚಟುವಟಿಕೆ ನಡೆಸುವ ಸ್ಥಳವಾಗಿದೆ. ಹಾಗೂ ಇಲ್ಲೇ ಬೇರೆ ಕಚೇರಿಗಳಿದ್ದು ಜನನಿಬಿಡ ಪ್ರದೇಶವಾಗಿದೆ. ಆದ್ದರಿಂದ ಈ ಟ್ರಾನ್ಸ್‌ಫಾರ್ಮರ್‌ನ ಕಬ್ಬಿಣದ ಕಂಬಕ್ಕೆ ವಿದ್ಯುತ್ ಹರಿದು ಅಪಾಯ ಸಂಭವಿಸುವ ಮುನ್ನ ಮೆಸ್ಕಾಂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಟ್ರಾನ್ಸ್‌ಫಾರ್ಮರ್ ಗೆ ಆವರಣ ಗೋಡೆ ನಿರ್ಮಿಸಿದರೆ ಸಂಭಾವ್ಯ ಅಪಾಯ ತಪ್ಪಿಸಬಹುದಿತ್ತು. ಆದರೆ ಈ ಟ್ರಾನ್ಸ್‌ಫಾರ್ಮರ್ ನಲ್ಲಿ ಕೆಲಸ ಮಾಡಲು ಲೈನ್ ಮ್ಯಾನ್ ಗಳು ಕೂಡ ಭಯಪಡುವಂತಾಗಿದೆ. ಮೂರು ದಶಕಕ್ಕಿಂತಲೂ ಹಳೆದಾದ ಈ ಕಬ್ಬಿಣದ ಕಂಬವನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸುವಂತೆ ಮಟಪಾಡಿಯ ಗ್ರಾಮಸ್ಥರು ಮನವಿ ಮಾಡಿದ್ದಾರೆ