ಉಡುಪಿ ಆದರ್ಶ ಆಸ್ಪತ್ರೆ: ಅಂತರಾಷ್ಟ್ರೀಯ ನರ್ಸ್ ದಿನ
ಉಡುಪಿ: ಆದರ್ಶ ಆಸ್ಪತ್ರೆ ಉಡುಪಿ ವತಿಯಿಂದ ಅಂತಾರಾಷ್ಟ್ರೀಯ ನರ್ಸ್ ದಿನವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಆಸ್ಪತ್ರೆಯ ಹಿರಿಯ ನರರೋಗ ತಜ್ಞರಾದ ಪ್ರೊ | ಎ. ರಾಜ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಜಿ ಎಸ್ ಚಂದ್ರಶೇಖರ್, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಮಲ ಚಂದ್ರಶೇಖರ್ ,ಆರ್ಥೋಪೆಡಿಕ್ ಸರ್ಜನ್ ಡಾ. ಮೋಹನದಾಸ್ ಶೆಟ್ಟಿ, ಜನರಲ್ ಸರ್ಜನ್ ಡಾ.ಪ್ರಶಾಂತ್ ಶೆಟ್ಟಿ ಹಾಗೂ ಹಿರಿಯ ಸ್ತ್ರೀರೋಗ ತಜ್ಞೆ ಡಾ.ದಮಯಂತಿ ಉಪಸ್ಥಿತರಿದ್ದರು.
ಸಿಸ್ಟರ್ ನಿರೀಕ್ಷ ಸ್ವಾಗತಿಸಿದರು, ಡಯಟಿಷನ್ ಅನುಶ್ರೀ ಕಾರ್ಯಕ್ರಮವನ್ನು ನಿರೂಪಿಸಿ, ಸಿಸ್ಟರ್ ಮನಿಷಾ ವಂದಿಸಿದರು.