ಮಣಿಪಾಲ: ಹೆಚ್ಚಿನ ಲಾಭಗಳಿಸುವ ಆಸೆಗೆ 10.83 ಲ.ರೂ ಕಳೆದುಕೊಂಡ ಯುವಕ

ಮಣಿಪಾಲ ಮೇ 25(ಉಡುಪಿ ಟೈಮ್ಸ್ ವರದಿ): ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಆಸೆ ತೋರಿಸಿ, ಪಾರ್ಟೈಮ್ ಜಾಬ್ ಹೆಸರಿನಲ್ಲಿ ವಂಚಿಸುತ್ತಿರುವ ಪ್ರಜರಣಗಳು ಹೆಚ್ಚಾಗಿದ್ದು, ಮಣಿಪಾಲದಲ್ಲಿ ಇಂತಹದ್ದೇ ಆನ್ಲೈನ್ ವಂಚನೆಗೆ ಒಳಗಾಗಿ ಯುವಕನೋರ್ವ 10.83 ಲ.ರೂ. ಕಳೆದುಕೊಂಡಿದ್ದಾರೆ. 

ಮಣಿಪಾಲದ  ವಂಶದೀಪ ಅವರ ವಾಟ್ಸಪ್‌ಗೆ ಮೇ 12 ರಂದು ಆನ್‌ ಲೈನ್‌ ಪಾರ್ಟ ಟೈಮ್‌ ಜಾಬ್‌ ಕುರಿತು ಲಿಂಕ್‌ ವೊಂದನ್ನು ಕಳಿಸಿ ಟೆಲಿಗ್ರಾಮ್‌ ಆಫ್‌ ನಲ್ಲಿರುವ “Coin DCX” ಎಂಬ ಗ್ರೂಪ್‌ ಗೆ ಜಾಯಿನ್‌ ಆಗುವಂತೆ ಸೂಚಿಸಲಾಗಿತ್ತು‌. ಅದರಂತೆ ವಂಶದೀಪ ಅವರು ಗ್ರೂಪ್‌ಗೆ ಜಾಯಿನ್ ಆಗಿದ್ದರು. ಆ ಬಳಿಕ ಟೆಲಿಗ್ರಾಮ್‌ ಗ್ರೂಪ್‌ ನಲ್ಲಿರುವ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್‌ ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೇ ಬ್ಯಾಂಕ್‌ ಖಾತೆಗೆ ಹಣವನ್ನು ಜಮಾ ಮಾಡುವುದಾಗಿ ನಂಬಿಸಿ ಬ್ಯಾಂಕ್‌ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದನು. ಆರಂಭದಲ್ಲಿ ವಿವಿಧ ರೀತಿಯ ಟಾಸ್ಕ್‌ ಗಳನ್ನು ಪೂರ್ಣಗೊಳಿಸಿದ ನಂತರ 7,860/- ರೂಪಾಯಿ ಹಣವು ಬೇರೆ ಬೇರೆ ಕಂತು ಗಳಲ್ಲಿ ಖಾತೆಗೆ ಜಮೆಯೂ ಆಗಿತ್ತು. 

ಆ ನಂತರ ಅಪರಿಚಿತ ವ್ಯಕ್ತಿಯು ಇನ್ನು ಹೆಚ್ಚು ಲಾಭ ಪಡೆಯಲು ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು, ಇದನ್ನು ನಂಬಿದ  ವಂಶದೀಪ ಅವರು 10,83,625/- ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಅಪರಿಚಿತ ವ್ಯಕ್ತಿಯು ಹೆಚ್ಚಿನ ಹಣವನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಿ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!