ಮಣಿಪಾಲ: ಭಜನಾ ತರಬೇತಿ ಮತ್ತು ಭಜನಾ ಕಾರ್ಯಕ್ರಮ
ಮಣಿಪಾಲ ಮೇ 25(ಉಡುಪಿ ಟೈಮ್ಸ್ ವರದಿ) ಹಾರಾಡಿಯ ಡಾ . ಎ.ವಿ ಬಾಳಿಗಾ ಆಸ್ಪತ್ರೆಯ ಆಶ್ರಯ ಹಿರಿಯ ನಾಗರಿಕ ನಿವಾಸದಲ್ಲಿ ಮಣಿಪಾಲದ ಈಶ್ವರ ನಗರದ ಶ್ರೀ ಮಹಾಮಾಯಿ ಭಜನಾ ಮಂಡಳಿ ಅಧ್ಯಕ್ಷೆ ಮಾಯಾ ಕಾಮತ್ ರವರ ಮಾರ್ಗದರ್ಶನದಲ್ಲಿ ಭಜನಾ ತರಬೇತಿ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಭಾಗಿರಥಿ ಕಿಣಿ ಅವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಭಜನಾ ಮಂಡಳಿಯ ಮಾಯಾ ಕಾಮತ್ , ರಮ್ಯಾ ಮಲ್ಯ ಕುಂದಾಪುರ , ಭಾಗೀರಥಿ ಕಿಣಿ ಮಣಿಪಾಲ ರವರನ್ನು ಗೌರವಿಸಲಾಯಿತು. ಮಹಾಮಾಯಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಬಾಳಿಗ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಕರುಣಾಕರ್ ಶೆಟ್ಟಿ, ಬಾಳಿಗ ಸಂಸ್ಥೆಯ ಸಮುದಾಯದ ಕಾರ್ಯನಿರ್ವಾಹಕರು ಸುರೇಶ್ ಎಸ್. ನಾವೂರು, ಆಶ್ರಯ ಸಂಸ್ಥೆಯ ಸಂಯೋಜಕ ಗಣೇಶ್ ಕೋಟ್ಯಾನ್, ಆಶ್ರಯದ ವಾರ್ಡನ್ ಅಕ್ಷತಾ ಹಾಗೂ ಭಜನಾ ತಂಡದ ಸದಸ್ಯರು ಆಶ್ರಮ ನಿವಾಸಿಗಳು ಉಪಸ್ಥರಿದ್ದರು.