ಮಣಿಪಾಲ: ಆಧಾರ್ ಕಾರ್ಡ್ ಬಗ್ಗೆ ಮೆಸೇಜ್ ಮಾಡಿ ಮಹಿಳೆಗೆ 2.55 ಲ.ರೂ ವಂಚನೆ
ಮಣಿಪಾಲ ಮೇ 24(ಉಡುಪಿ ಟೈಮ್ಸ್ ವರದಿ) : ಆಧಾರ್ ಕಾರ್ಡಿನ ಬಗ್ಗೆ ಮೊಬೈಲ್‌ಗೆ ಸಂದೇಶ ಕಳುಹಿಸಿ ಖಾತೆಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಮಣಿಪಾಲದ ದಶರಥ ನಗರದ ನಿವಾಸಿ ಆಶಾಲತಾ ಆರ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಆಶಾಲತಾ ಆಚಾರ್ ಅವರ ಮೊಬೈಲ್‌ಗೆ ಮೇ 20ರಂದು ಆಧಾರ ಕಾರ್ಡಿನ ಬಗ್ಗೆ ಸಂದೇಶ ಬಂದಿದ್ದು ಕೆಲವೇ ಕ್ಷಣದಲ್ಲಿ ಆಶಾಲತಾ ಅವರ ಬ್ಯಾಂಕ್ ಮತ್ತು ಆರ್‌ಡಿ ಖಾತೆಯಿಂದ ಅಪರಿಚಿತರು 2,55,892ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.