ಮಾಹೆ ಅಂತರ್‌ ಕಾಲೇಜು ಆಟೋಟ ಸ್ಪರ್ಧೆಯಲ್ಲಿ ಎಂಐಟಿಗೆ ಚಾಂಪಿಯನ್‌ಶಿಪ್‌

ಮಣಿಪಾಲ ಮೇ 24(ಉಡುಪಿ ಟೈಮ್ಸ್ ವರದಿ): ಮಾಹೆಯ ಶೈಕ್ಷಣಿಕ ವರ್ಷ 2023-24 ಸಾಲಿನ ಅಂತರ್‌ ಕಾಲೇಜು ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭವು ಮಾಹೆಯ ಕೌನ್ಸೆಲಿಂಗ್‌ ಸಭಾಂಗಣದಲ್ಲಿ ನಡೆಯಿತು.

ಸಮಾಪನ ಸಮಾರಂಭದಲ್ಲಿ ಮಾಹೆಯ ಸಹಕುಲಾಧಿಕಪತಿಗಳಾದ ಡಾ. ಎಚ್‌. ಎಸ್‌. ಬಲ್ಲಾಳ್‌ ಅವರು ಮಾತನಾಡಿ, ಬೋಧಕರು ಮತ್ತು ವಿದ್ಯಾರ್ಥಿಗಳಲ್ಲಿ ಕ್ರೀಡಾಮನೋಭಾವವನ್ನು ಉತ್ತೇಜಿಸಲು ಇಂಥ ಕಾರ್ಯಕ್ರಮಗಳ ಅಗತ್ಯವಿದೆ. ಕ್ರೀಡೆಗಳು ಸಾಮುದಾಯಿಕ, ಸಾಮೂಹಿಕ ಮತ್ತು ಆರೋಗ್ಯಕರ ಸ್ಫರ್ಧೆಯ ಭಾವನೆಯನ್ನು ಹೆಚ್ಚಿಸುತ್ತವೆ. ಆಟೋಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ಚಾರಿತ್ರ್ಯವನ್ನು ರೂಪಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದರು

ಹಾಗೂ ಕ್ರೀಡೆಗಳು ಸ್ಪಂದನಶೀಲ ಗುಣ, ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅಗತ್ಯವಾಗಿರುವ ಗುಣಗಳನ್ನು ಅಳವಡಿಸಿಕೊಳ್ಳಲು ಪೂರಕವಾಗಿರುತ್ತವೆ’ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸಬೇಕು’ ಎಂದು ಅವರು ಕರೆ ನೀಡಿದರು.

ಈ ವೇಳೆ ಉಪಕುಲಪತಿಗಳಾದ ಲೆ. ಜ. ಡಾ.ಎಂ. ಡಿ. ವೆಂಕಟೇಶ್‌ ಅವರು ಮಾತನಾಡಿ, ‘ ಕ್ರೀಡೆಗಳಲ್ಲಿ ನಿಯತವಾಗಿ ಭಾಗವಹಿಸುವುದರಿಂದ ಆರೋಗ್ಯಕ್ಕೆ ಲಾಭವಿದೆ. ಒಂದು ಅಥವಾ ಎರಡು ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವುದು ಅತ್ಯುತ್ತಮವಾದ ಅಭ್ಯಾಸವಾಗಿದೆ. ಇದು ಶಾರೀರಿಕವಾಗಿ ಪ್ರಯೋಜನಕಾರಿಯಷ್ಟೇ ಅಲ್ಲದೆ ಸಮನ್ವಯದ ಮನೋಸ್ಥಿತಿಗೆ ಕಾರಣವಾಗುತ್ತದೆ. ಶೈಕ್ಷಣಿಕ ಮತ್ತು ವೃತ್ತಿಪರ ದಿನಚರಿಗಳಿಂದ ಬಿಡುವಿಲ್ಲದ ಒತ್ತಡದಿಂದ ಕೊಂಚ ಬಿಡುಗಡೆ ನೀಡುತ್ತವೆ. ಜೊತೆಗೆ ಒಗ್ಗಟ್ಟು ಮತ್ತು ಸಹಕಾರದ ಬದುಕನ್ನು ಪ್ರೇರೇಪಿಸುತ್ತವೆ. ಸಮತೋಲದ ಮತ್ತು ಸ್ವಾಸ್ಥ್ಯಪೂರ್ಣ ಜೀವನವಿಧಾನಕ್ಕೆ ಕ್ರೀಡೆಯ ಅಗತ್ಯವಿದೆ’ ಎಂದು ಹೇಳಿದರು.

ಮಾಹೆಯ ಘಟಕವಾದ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ [ಎಂಐಟಿ] ಯು ಮಾಹೆಯ ಅಂತರ್‌ಕಾಲೇಜು ಆಟೋಟ ಸ್ಪರ್ಧೆ2023-24 ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಎಂಐಟಿಯ ನಿರ್ದೇಶಕ ಕಮಾಂಡರ್‌ ಡಾ.ಅನಿಲ್‌ ರಾಣಾ ಅವರು ಸಮಗ್ರ ಛಾಂಪಿಯನ್‌ಶಿಪ್‌ ಟ್ರೋಫಿಯನ್ನು ಅತಿಥಿಗಳಿಂದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಎಂಐಟಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ  ಡಾ. ಉಪೇಂದ್ರ ನಾಯಕ್‌,   ವಿವಿಧ ಘಟಕಗಳ ಮುಖ್ಯಸ್ಥರು, ವಿಭಾಗ ಮುಖ್ಯಸ್ಥರು, ಅಧಿಕಾರಿಗಳು, ಬೋಧಕರು, ಬೋಧಕೇತರ ಸಿಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!