ಕೋಟ: ವ್ಯಕ್ತಿ ನಾಪತ್ತೆ
ಕೋಟ ಮೇ 22(ಉಡುಪಿ ಟೈಮ್ಸ್ ವರದಿ): ಕೆಲಸ ಇದೆ ಎಂದು ಹೇಳಿ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ
ಠಾಣಾ ವ್ಯಾಪ್ತಿಯ ನಿವಾಸಿ ಅಕ್ಷಯ (32) ನಾಪತ್ತೆಯಾಗಿರುವವರು. ಇವರು ಕೋಟದ ಫಿಶ್ ಮಿಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಮೇ 21 ರಂದು ಕೆಲಸಕ್ಕೆ ರಜೆ ಮಾಡಿ ಮನೆಯಿಂದ ಹೋಗಿದ್ದರು. ಬಳಿಕ ಇವರು ತಮ್ಮ ಪತ್ನಿಗೆ ಕೋಟದಲ್ಲಿ ಮಧ್ಯಾಹ್ನದ ವೇಳೆ ಕಾಣಿಸಿಕೊಂಡಿದ್ದು ಕೆಲಸ ಇದೆ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಸಹ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.