ದುಬೈನ ಡೆಲ್ಲಿ ಪಬ್ಲಿಕ್ ಸ್ಕೂಲ್‍ನ ವೆಲ್ ಬೀಯಿಂಗ್ ಪ್ರೆಸಿಡೆಂಟ್ ಆಗಿ ಕಾರ್ಕಳದ ಬಾಲಕಿ ಅನಿಕಾ ಆಯ್ಕೆ

ಕಾರ್ಕಳ ಮೇ 22 (ಉಡುಪಿ ಟೈಮ್ಸ್ ವರದಿ): ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಅಜೆಕಾರು ಬೊಂಡುಕುಮೇರಿ ನಿವಾಸಿ ಯಾದ ರಶ್ಮಿ ಗುರುಪ್ರಸಾದ್ ಇವರ ಮಗಳಾದ ಅನಿಕಾ ದುಬೈ ನ ಹೃದಯಭಾಗದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವೆಲ್ ಬೀಯಿಂಗ್ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದಾರೆ.
ಅನಿಕಾ ಅವರು ಅಜೆಕಾರು ಬೊಂಡುಕುಮೇರಿಯ ನಿವೃತ್ತ ಉಪತಹಶಿಲ್ದಾರ್ ಆಗಿರುವ ಬಾಲಕೃಷ್ಣ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಜಲಜಾ ಬಾಲಕೃಷ್ಣ ಇವರ ಮೊಮ್ಮಗಳಾಗಿದ್ದು, ಏಳನೆ ತರಗತಿಯಲ್ಲಿ ಓದುತ್ತಿದ್ದಾರೆ. ಅನಿಕಾ ಅವರು ಕರಾಟೆಯಲ್ಲಿ ದುಬೈನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮೂರು ಬಾರಿ ಬ್ಲಾಕ್ ಬೆಲ್ಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇವಲ ಆಟೋಟ ಸ್ಪರ್ಧೆಗಳಲ್ಲಿ ಮಾತ್ರವಲ್ಲದೆ ಕಲಿಕೆಯಲ್ಲಿಯೂ ಉತ್ತಮ ಅಂಕಗಳಿಸಿದ್ದು ಪಠ್ಯೆತರ ಚಟುವಟಿಕೆಗಳಲ್ಲಿ ಭರತನಾಟ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜ್ಯೂನಿಯರ್ ಪ್ರಶಸ್ತಿ ಸೇರಿದಂತೆ ವೆಸ್ಟರ್ನ್ ಸಿಂಗರ್ ಅಗಿದ್ದಾರೆ. ಇವರು ದುಬೈನ ಪ್ರಖ್ಯಾತ ಮಾಲ್‍ನಲ್ಲಿ ಶೋಗಳನ್ನು ನೀಡುತಿದ್ದು ಜನಮನ್ನಣೆ ಗಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!