ಉಡುಪಿ: ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಕಾರಿನಲ್ಲಿ ತಲಾವಾರು ಹಿಡಿದು ಕಳ್ಳತನಕ್ಕೆ ಯತ್ನ
ಉಡುಪಿ ಮೇ 21(ಉಡುಪಿ ಟೈಮ್ಸ್ ವರದಿ): ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಕಾರಿನಲ್ಲಿ ತಲವಾರು ಹಿಡಿದು ಕಳ್ಳತನ ನಡೆಸಲು ಯತ್ನಿಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 13 ರಿಂದ ಮೇ 17 ರ ಅವಧಿಯಲ್ಲಿ ಬ್ರಹ್ಮಾವರದ ಬಾರ್ಕೂರಿನ ಆಸ್ಟಲಿನ್ ಸೋನಲ್ ಲೂವಿಸ್ ಅವರಿಗೆ ಧನುಷ್ ಎಂಬುವವರು ಮಾರಾಟ ಮಾಡಲು ನೀಡಿದ ಕಾರನ್ನು ತಮ್ಮ ಪರಿಚಯದ ಮಹ್ಮದ್ ಫಾಝಿಲ್ ಎಂಬುವವರು ತೆಗೆದುಕೊಂಡು ಹೋಗಿ ಟೆಸ್ಟ್ ಡ್ರೈವ್ ಗಾಗಿ ಆರೋಪಿತರಾದ ಇಸಾಕ್ ಮತ್ತು ಇತರರಿಗೆ ನೀಡಿದ್ದರು. ಆರೋಪಿತರುಗಳು ಕಾರನ್ನು ಜಖಂಗೊಳಿಸಿ ಕಾರಿಗೆ 2 ಲಕ್ಷ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದ್ದು ಅಲ್ಲದೆ ಕಾರಿನಲ್ಲಿ ಅಕ್ರಮವಾಗಿ ತಲವಾರನ್ನು ಇರಿಸಿ ಉಡುಪಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.