ಬೈಂದೂರು ಮೇ 20(ಉಡುಪಿ ಟೈಮ್ಸ್ ವರದಿ):ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೈಂದೂರಿನ ಕೆರ್ಗಾಲು ಗ್ರಾಮದ ಹೊಟೇಲ್‌ವೊಂದರ ಸಮೀಪ ನಡೆದಿದೆ.
ಮೃತರ ಹೆಸರನ್ನು ಮಾಧವ ಎಂದು ಗುರುತಿಸಲಾಗಿದೆ. ಇವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಅಸ್ವಸ್ಥಗೊಂಡು ಮೃತಪಟ್ಟಿರಬಹುದು ಎಂಬುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.