ಕಾರ್ಕಳ: ಮೇ 16- ಕಲ್ಕುಡ ಕಲ್ಲರ್ಟಿ ತೂಕತ್ತೇರಿ ದೈವಗಳಿಗೆ ಭೋಗ ತಂಬಿಲ ಸೇವೆ

ಕಾರ್ಕಳ ಮೇ 13(ಉಡುಪಿ ಟೈಮ್ಸ್ ವರದಿ) : ಶ್ರೀಕ್ಷೇತ್ರ ಪರ್ಪಲೆಗಿರಿ ಅತ್ತೂರು ಇಲ್ಲಿನ ಧರ್ಮದೈವಗಳಿಗೆ ವಾರ್ಷಿಕ ಭೋಗತಂಬಿಲ ಸೇವೆಯು ಮೇ 16 ರಂದು ರಾತ್ರಿ 8.30 ಕ್ಕೆ ನಡೆಯಲಿದೆ ಎಂದು  ಕ್ಷೇತ್ರದ ಆಡಳಿತ ಸಮಿತಿ ತಿಳಿಸಿದೆ.

ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಮಿತಿ, ಕಾರ್ಕಳದ ಅತ್ತೂರು ಪರ್ಪಲೆ ಗಿರಿ ಪುಣ್ಯಕ್ಷೇತ್ರದಲ್ಲಿ  ಆರಾಧಿಸಲ್ಪಡುವ ಕಲ್ಕುಡ ಕಲ್ಲರ್ಟಿ ತೂಕತ್ತೇರಿ ದೈವಗಳಿಗೆ  ಭೋಗ ತಂಬಿಲ ಸೇವೆಯು ನಡೆಯಲಿದ್ದು, ಸಾವಿರಾರು ಭಕ್ತಾದಿಗಳು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರ್ಷ  ನಡೆದ ಕಾಲಾವಧಿ ಭೋಗಕ್ಕೆ 2000 ಕ್ಕಿಂತಲೂ ಅಧಿಕ ಜನರು ಆಗಮಿಸಿದ್ದರು ಎಂದು ತಿಳಿಸಿದೆ.

ಹಾಗೂ ತಂಬಿಲ ಸೇವೆ ನೀಡುವ ಭಕ್ತಾದಿಗಳು ಮುಂಚಿತವಾಗಿ ತಿಳಿಸಬೇಕು. ತಂಬಿಲ ಸೇವೆ ನೀಡುವ ಭಕ್ತಾದಿಗಳು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ 9663559251,8792375667 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ  ಸಮಿತಿ ತಿಳಿಸಿದೆ.

ಅತ್ಯಂತ ಕಾರಣಿಕದ ಕ್ಷೇತ್ರವಾಗಿರುವ ಪರ್ಪಲೆ ಗಿರಿಗೆ ಇತ್ತೀಚೆಗೆ ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದು ಪ್ರತಿ ತಿಂಗಳ ಸಂಕ್ರಮಣಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುತ್ತಾರೆ. ಎತ್ತರದ ಪರ್ವತ ಪ್ರದೇಶದಲ್ಲಿರುವ ಈ ಕ್ಷೇತ್ರ ಐತಿಹಾಸಿಕವಾಗಿಯೂ ಮಹತ್ವವನ್ನು ಪಡೆದಿರುತ್ತದೆ. ಈ ಕ್ಷೇತ್ರದಲ್ಲಿ ಸಂಕ್ರಾಂತಿ ಪೂಜೆ ಮತ್ತು ತಂಬಿಲ ಸೇವೆಗೆ ವಿಶೇಷ ಮಹತ್ವವಿದ್ದು, ಈ ಹರಕೆಯನ್ನು ಹೊತ್ತವರ ಇಷ್ಟಾರ್ಥಗಳು  ಪವಾಡದ ರೀತಿಯಲ್ಲಿ ಕೈಗೂಡಿದ ನೂರಾರು ಘಟನೆಗಳಿವೆ. ಹೀಗಾಗಿ ಪ್ರತಿ ವರ್ಷ ನೂರಾರು ಜನರು ಈ ಹರಕೆಯನ್ನು ಹೊತ್ತು ಕ್ಷೇತ್ರಕ್ಕೆ ಆಗಮಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!