ಕಾರ್ಕಳ: ಪರಶುರಾಮ ಥೀಮ್ ಪಾರ್ಕ್ ನಲ್ಲಿರುವ ಭಗ್ನಗೊಂಡ ಪರಶುರಾಮ ಮೂರ್ತಿಯ ಹಸ್ತಾಂತರಕ್ಕೆ ವಿರೋಧ

ಕಾರ್ಕಳ ಮೇ 9(ಉಡುಪಿ ಟೈಮ್ಸ್ ವರದಿ): ಕಾರ್ಕಳದ ಪರಶುರಾಮ ಥೀಮ್ವಪಾರ್ಕ್ ಹಗರದ ಅಂತಿಮ ತನಿಖೆ ವರದಿ ಸಲ್ಲಿಸುವವರೆ ಭಗ್ನಗೊಂಡ ಪರಶುರಾಮ ಮೂರ್ತಿಯ ಹಸ್ತಾಂತರಕ್ಕೆ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿದೆ. 

ಈ ಬಗ್ಗೆ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಗೌರವಾದ್ಯಕ್ಷ ಕೆ ಕೃಷ್ಣ ಮೂರ್ತಿ ಆಚಾರ್ಯ ರವರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. 

ಹಾಗೂ ಕಾರ್ಕಳದ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆಯನ್ನು ರಾಜ್ಯ ಸರಕಾರದಿಂದ ನಿಯೋಜಿತಗೊಂಡಿರುವ CID ತಂಡ ತನಿಖೆಯನ್ನು ನೆಡೆಸುತ್ತಿದ್ದು ಹಾಗೂ ಮಾನ್ಯ ನಾಗ ಮೋಹನ್ ದಾಸ್ ವಿಚಾರಣಾ ಆಯೋಗದ ತನಿಖೆಯ ಅಂತಿಮ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುವವರೆಗೆ ಯಾವುದೇ ಕಾರಣಕ್ಕೂ ಪರಶುರಾಮ ಮೂರ್ತಿಗೆ  ಸಂಬಂದಿತ ಕಂಚು ಖರೀದಿಯಲ್ಲಿ GST ವಂಚನೆ ಮಾಡಿರುವ ಶಿಲ್ಪಿ ಕೃಷ್ಣ ನಾಯಕ್ – Krish Art World ರವರಿಗೆ ಪರಶುರಾಮಮೂರ್ತಿಯ ಉಳಿದ ಭಾಗವನ್ನು ತೆಗೆದು  ಹಸ್ತಾಂತರ ಮಾಡಬಾರದು ಎಂದು ಮನವಿ ಮಾಡಿದ್ದಾರೆ‌.

ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯು ಅಭಿವೃದ್ಧಿ ಪರ ಇದ್ದು ಜನರ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿರುವ ವ್ಯಕ್ತಿಗಳ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಿ ಪರಶುರಾಮ ಮೂರ್ತಿಯನ್ನು ಉಮ್ಮಿಕಲ್ ಬೆಟ್ಟದಲ್ಲಿ ಪುನರ್ ಸ್ಥಾಪಿಸುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!