ಮೇ10- ತಿಂಡಿ-ತಿನಸು, ಕರಕುಶಲ ವಸ್ತುಗಳ ಮಳಿಗೆ “ಉಡುಪಿ ಸ್ಟೋರ್ಸ್” ಶುಭಾರಂಭ
ಉಡುಪಿ ಮೇ 09(ಉಡುಪಿ ಟೈಮ್ಸ್ ವರದಿ): ಸಾಂಪ್ರದಾಯಿಕ ತಿಂಡಿ ತಿನಿಸುಗಳ ಹಾಗೂ ಕರಕುಶಲ ವಸ್ತುಗಳ ನೂತನ ಮಳಿಗೆ ” ಉಡುಪಿ ಸ್ಟೋರ್ಸ್” ಮೇ 10 ರಂದು ಸಂಜೆ 5 ಗಂಟೆಗೆ ಉಡುಪಿಯ ಬನ್ನಂಜೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನೆಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
ಈ ನೂತನ ಮಳಿಗೆಯನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಬಳಿಕ ಆಶಿರ್ವಚನ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗದ ನಿಯಂತ್ರಣಾಧಿಕಾರಿ ಕೆ.ರಾಜೇಶ್ ಶೆಟ್ಟಿ, ನಗರ ಸಭೆ ಪೌರಾಯುಕ್ತ ರಾಯಪ್ಪ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಡಿಟಿಒ ಕಮಲ್ ಕುಮಾರ್, ಉಡುಪಿ ಡಿಪ್ಪೋ ಮ್ಯಾನೇಜರ್ ಶಿವರಾಮ್ ನಾಯ್ಕ್ ಅವರು ಉಪಸ್ಥಿತರಿರಲಿದ್ದಾರೆ.
ವಿ 21ಗ್ರೂಪ್‌ನ ನೂತನ ಮಳಿಗೆ ಯಾಗಿರುವ ಈ ಮಳಿಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಇಲ್ಲಿ ಸಾಂಪ್ರದಾಯಿಕ ತಿಂಡಿ- ತಿನಿಸುಗಳು, ಅತ್ಯಾಕರ್ಷಕ ಗುಣಮಟ್ಟದ ಕರಕುಶಲ ವಸ್ತುಗಳ ಸಂಗ್ರಹ ಕಾಣಬಹುದಾಗಿದೆಂದು ಸಂಸ್ಥೆಯ ಮುಖ್ಯಸ್ಥರಾದ ದಿವಾಕರ್ ಸನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.