ಉಡುಪಿ: ಫ್ಲಿಪ್ ಕಾರ್ಟ್‌ನಲ್ಲಿ ಹೆಸರಲ್ಲಿ ವ್ಯಕ್ತಿಗೆ 5.05 ಲ.ರೂ. ವಂಚನೆ

ಉಡುಪಿ ಮೇ 8( ಉಡುಪಿ ಟೈಮ್ಸ್ ವರದಿ): ಫ್ಲಿಪ್ ಕಾರ್ಟ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 5.05 ಲಕ್ಷಣಗಳನ್ನು ರೂ. ವಂಚಿಸಿರುವ ಬಗ್ಗೆ ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಡಬೆಟ್ಟು ನಿವಾಸಿ ಸುದರ್ಶನ (28) ಎಂಬವರಿಗೆ ಏ.14 ರಂದು  ಟೆಲಿಗ್ರಾಮ್ ನಲ್ಲಿ Flipkart page ಗೆ like ಮಾಡಿ ಟಾಸ್ಕ್‌ ನಡೆಸಿ ಹಣಗಳಿಸುವ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಸುದರ್ಶನ ಅವರು ಹಣವನ್ನು ಹೂಡಿಕೆ ಮಾಡಿದ್ದು ನಂತರದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಬರುವುದಾಗಿ ಆರೋಪಿಗಳು ನಂಬಿಸಿದ್ದರು. ಇದನ್ನು ನಂಬಿದ ಸುದರ್ಶನ ಅವರು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಮೇ 6 ರಿಂದ ಹಂತ ಹಂತವಾಗಿ ಒಟ್ಟು ರೂ. 5,05,000/- ಹಣವನ್ನು ಪಾವತಿಸಿದ್ದರು. ಆದರೆ, ಆರೋಪಿ ಗಳು  ಲಾಭಾಂಶವನ್ನು ಹಾಗೂ ನೀಡಿದ ಹಣವನ್ನೂ ಹಿಂತಿರುಗಿಸದೇ ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!