ಬೈಂದೂರು: ಕಟ್ಟಿಂಗ್ ಶಾಪ್‌ಗೆಂದು ಹೋದ ವ್ಯಕ್ತಿ ನಾಪತ್ತೆ

ಬೈಂದೂರು ಮೇ 8(ಉಡುಪಿ ಟೈಮ್ಸ್ ವರದಿ): ಕಟ್ಟಿಂಗ್ ಶಾಪ್ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೈಂದೂರಿನ ಹೇರೂರು ಗ್ರಾಮದ ರಾಗಿಹಕ್ಲು ಎಂಬಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಹೆಚ್.ಶೇಖರ ಗೌಡ (40) ನಾಪತ್ತೆಯಾಗಿರುವವರು. ಇವರು ಮೇ 5 ರಂದು ಮಧ್ಯಾಹ್ನದ ವೇಳೆ ಮನೆಯಲ್ಲಿ ಊಟ ಮಾಡಿ ತಾಯಿಯ ಬಳಿ ಕಟ್ಟಿಂಗ್ ಶಾಪ್ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಬಾರದೇ ಇದ್ದು, ಇವರ ಬಗ್ಗೆ  ಆಸುಪಾಸಿನಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನಾಪತ್ತೆಯಾಗಿರುವವರ ಅಕ್ಕ ಯಶೋಧ ಎಂಬವರು ನೀಡಿದ ದೂರಿನಂತೆ  ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!