ಬ್ರಹ್ಮಾವರ: ಅನಾರೋಗ್ಯದ ಕಾರಣ- ವೃದ್ಧೆ ಆತ್ಮಹತ್ಯೆ
ಬ್ರಹ್ಮಾವರ ಮೇ 6 (ಉಡುಪಿ ಟೈಮ್ಸ್ ವರದಿ) : ಅನಾರೋಗ್ಯದ ಕಾರಣ ಮನನೊಂದು 80ರ ವಯೋವೃದ್ಧೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದ ಚಾಂತಾರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಸುಶೀಲ ಬಾಯಿ (80) ಆತ್ಮಹತ್ಯೆ ಮಾಡಿಕೊಂಡವರು. ಇವರು ತನಗಿರುವ ವಯೋ ಸಂಬಂಧಿ ಖಾಯಿಲೆಯಿಂದ ಜೀವನದಲ್ಲಿ ಜೀಗುಪ್ಸೆಗೊಂಡು ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಗ್ಗಿನ ಮಧ್ಯಾವಧಿಯಲ್ಲಿ ತಾನು ವಾಸವಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.