ಮಣಿಪಾಲ: ಬಸ್ ಮಾಲೀಕನ ವಿರುದ್ಧ ನಿರ್ವಾಹಕನಿಂದ ದೂರು

ಮಣಿಪಾಲ ಮೇ 6 (ಉಡುಪಿ ಟೈಮ್ಸ್ ವರದಿ): ಉಡುಪಿಯ ಖಾಸಗಿ ಬಸ್ ಮಾಲೀಕರ ವಿರುದ್ಧ ಹಲ್ಲೆ ಮಾಡಿ ಬೆದರಿಕೆಯೊಡ್ಡಿರುವ ಬಗ್ಗೆ ತಮ್ಮದೇ ಬಸ್‍ನ ನಿರ್ವಾಕರೊಬ್ಬರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಖಾಸಗಿ ಬಸ್‍ನ ನಿರ್ವಾಹಕರಾದ ಮೊಹಮ್ಮದ್ ಶಹನ್ ತಾವು ಕಾರ್ಯನಿರ್ವಹಿಸುತ್ತಿರುವ ಬಸ್‍ನ ಮಾಲೀಕರಾದ ಸೈಪುದ್ದೀನ್ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಇವರು ಸುಮಾರು 4 ವರ್ಷಗಳಿಂದ ಖಾಸಗಿ ಬಸ್‍ವೊಂದರಲ್ಲಿ ಕಂಡಕ್ಟರ್ ಕೆಲಸ ಮಾಡಿಕೊಂಡಿದ್ದರು. ಇವರು ಮೇ 4 ರಂದು ಮಧ್ಯಾಹ್ನದ ವೇಳೆ ಮಣಿಪಾಲದಲ್ಲಿರುವ ಬಸ್ಸ್ ನ ಆಫೀಸ್ ನ ಕಂಪೌಂಡ್ ಒಳಗಡೆ ಕುಳಿತ್ತಿದ್ದಾಗ. ಬಸ್ಸಿನ ಮಾಲಿಕ ಸೈಪುದ್ದೀನ್ ರವರು ಆಫೀಸ್ ಒಳಗಡೆಯಿಂದ ಹೊರಗೆ ಬಂದು ಮತ್ತೊಂದು ಖಾಸಗಿ ಬಸ್‍ನ ಕಂಡಕ್ಟರ್ ನವೀನ್ ಎಂಬವರಿಗೆ ಏಕೆ ಬೈದಿದ್ದು ಎಂದು ಕೇಳಿ ತುಳಿದು ಹಲ್ಲೆ ಮಾಡಿದ್ದು ಅಲ್ಲದೆ ಈ ಬಗ್ಗೆ ಪೊಲೀಸ್ ದೂರು ನೀಡದಂತೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!