ಕೃಷಿ ಸ್ವಾವಲಂಬನೆ ಪ್ರತೀಕ : ಡಾ.ರಾಮಕೃಷ್ಣ ಆಚಾರ್
ಕಾರ್ಕಳ ಮೇ.1(ಉಡುಪಿ ಟೈಮ್ಸ್ ವರದಿ): ಕೃಷಿ ಸ್ವಾವಲಂಬನೆ ಪ್ರತೀಕ ಕೃಷಿ ಮೂಲಕ ಜೀವನ ನಡೆಸಲು ಸೂಕ್ತ ಅವಕಾಶ ಇದೆ ಎಂದು ಡಾ. ರಾಮಕೃಷ್ಣ ಆಚಾರ್ ಅವರು ಹೇಳಿದ್ದಾರೆ.
ಮುನಿಯಾಲ್ ಗೋದಾಮದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಕೃಷಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಮನುಷ್ಯನ ಆರೋಗ್ಯ , ಆಯುಷ್ಯ, ಸಂಪತ್ತನ್ನು ವೃದ್ಧಿಸುತ್ತದೆ, ಕೃಷಿ ಮೂಲಕ ಮನುಷ್ಯ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿ ಯಾವತ್ತೂ ಬಡತನವಲ್ಲ ಬಡತನವನ್ನು ಹೊಡೆದೋಡಿಸುವ ಸಾಧನ. ದೇಶದ ಬೆನ್ನೆಲುಬಾಗಿರುವ ಕೃಷಿಕ ಹಲವಾರು ಸಮಸ್ಯೆಗಳನ್ನು ಎದುರಿಸಲಿಕ್ಕೆ ಆದುನಿಕ ಕೃಷಿ ವಿಧಾನವೂ ಕಾರಣವೆನ್ನಬಹುದು ಎಂದರು.
ಹಾಗೂ ಅತಿಯಾದ ರಾಸಾಯನಿಕ ಬಳಕೆ ಭೂಮಿಯ ಫಲವತ್ತತೆಯನ್ನು ಕಡಿಮೆಯಾಗಿಸುತ್ತಿದೆ. ಬೆಳೆಯುವ ಕೃಷಿ ಜೊತೆ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ಪಕ್ಷಿ ಸಾಕಣೆಗಳು ಕೃಷಿಕನ ಸಂಪತ್ತನ್ನು ವೃದ್ಧಿಸುತ್ತದೆ ಎಂದರು
ಅತಿ ಕಡಿಮೆ ಭೂಮಿಯಲ್ಲಿಯೂ ಕೂಡ ಅತೀ ಹೆಚ್ಚು ಹಣವನ್ನು ಸಂಪಾದಿಸಬಹುದು. ಮನೆಗಳ ತಾರಸಿ ಮೇಲೆ ಹೂವು ಹಣ್ಣು ತರಕಾರಿಗಳನ್ನು ಬೆಳೆಯುವ ಮೂಲಕ ಕುಟುಂಬದ ಅವಶ್ಯಕತೆ ಬೇಕಾಗುವ ಅಗತ್ಯ ವಸ್ತುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಮನೆಗಳಲ್ಲಿಯೇ ಬೆಳೆಯಬಹುದಾಗಿದೆ ಈ ಮೂಲಕ 75 ಶೇಕಡಾ ಉಳಿತಾಯ ಮಾಡಬಹುದಾಗಿದೆ. ಹೈನುಗಾರಿಕೆ ಮೂಲಕ ಮನೆಬಳಕೆ ಬೇಕಾಗುವುದನ್ನು ಬಳಸಿಕೊಂಡು ಹಾಲು ಮಜ್ಜಿಗೆ ಬೆಣ್ಣೆ ತುಪ್ಪ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅಧಿಕ ಲಾಭವನ್ನು ಗಳಿಸಬಹುದಾಗಿದೆ ಎಂದರು
ವಿದ್ಯೆಯ ಜೊತೆಗೆ ಕೃಷಿ ಮನುಷ್ಯನ ಬೌದಿಕ ಶಕ್ತಿಯನ್ನು ಕೂಡ ವಿಕಸನ ಗೊಳಿಸುತ್ತದೆ ಬರಡು ಭೂಮಿಯಲ್ಲಿ ಗಿಡ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಸಂಪತ್ತನ್ನು ವೃದ್ಧಿಗೊಳಿಸ ಬಹುದಾಗಿದೆ. ಅರಣ್ಯದ ಜೊತೆಗೆ ತೋಟಗಾರಿಕಾ ಬೆಳೆಗಳನ್ನು ಕೂಡ ಬೆಳೆಸಬಹುದಾಗಿದೆ ಎಂದರು
ಈ ಸಂದರ್ಭದಲ್ಲಿ ಸವಿತಾ ಆರ್ ಅಚಾರ್, ರಕ್ಷತ್ ಅಚಾರ್ ಉಪಸ್ಥಿತರಿದ್ದರು