ಸಮಾಜದಲ್ಲಿ ಮಾನವೀಯತೆ, ತೃಪ್ತಿಯ ಗುಣ ಕಡಿಮೆಯಾಗಿದೆ- ಎನ್. ಸಂತೋಷ್ ಹೆಗ್ಡೆ

ಉಡುಪಿ ಮೇ.1(ಉಡುಪಿ ಟೈಮ್ಸ್ ವರದಿ): ಇರ್ಮಾಡಿ ಬೀಡು ಹಾವಂಜೆ ಇಲ್ಲಿನ ಅಬ್ಬಗ ದಾರಗ ಶ್ರೀ ವೀರàಭದ್ರ ಸಪರಿವಾರ ದೇವಸ್ಥಾನದಲ್ಲಿ ಏ.29 ರಿಂದ ಮೇ.2 ರ ವರೆಗೆ ನಡೆಯಲಿರುವ ಶ್ರೀ ನಾಗ ದೇವರ ಪುನಃ ಪ್ರತಿಷ್ಟಾಪನೆ, ಬ್ರಹ್ಮ ಕಲಶಾಭಿಷೇಕ, ಶ್ರೀ ವೀರ ಭದ್ರ ಸ್ವಾಮಿಗೆ ಬ್ರಹ್ಮ ಕುಂಬಾಭಿಷೇಕ ಹಾಗೂ ಕಾಲಾವಧಿ ಕಲ್ಕುಡ ಕೋಲ ಧಾರ್ಮಿಕ ಸಭಾ ಕಾರ್ಯಕ್ರಮ ಇಂದು ನಡೆಯಿತು.

ಸಭಾ ಕಾರ್ಯಕ್ರಮವನ್ನು ಇರ್ಮಾಡಿ ಬೀಡು ಫ್ಯಾಮಿಲಿ ಟ್ರಸ್ಟ್‍ನ ಹಿರಿಯರಾದ ಪ್ರಸನ್ನ ಹೆಗ್ಡೆ ಹಾಗೂ ನಿಟ್ಟೆ ವಿದ್ಯಾ ಸಮೂಹ ಸಂಸ್ಥೆಗಳ ಕುಲಪತಿ ಎನ್. ವಿನಯ್ ಹೆಗ್ಡೆ, ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತರಾದ ಎನ್ ಸಂತೋಷ್ ಹೆಗ್ಡೆ ಅವರು ಉದ್ಘಾಟಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಮಾಜಿ ಲೋಕಾಯುಕ್ತರಾದರಾದ ಎನ್. ಸಂತೋಷ್ ಹೆಗ್ಡೆ ಅವರು ಹುಟ್ಟುವಾಗ ಮಾನವನಾಗಿ ಹುಟ್ಟದೇ ಇದ್ದರೂ ಜೀವನದಲ್ಲಿ ಮಾನವೀಯತೆಯನ್ನು ಅಳವಡಿಸಿಕೊಂಡು ಸಾಯುವಾಗ ಮಾನವನಾಗಿ ಸತ್ತರೆ ಅದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ ಎಂದು ಹೇಳಿದ್ದಾರೆ.

ಹಾಗೂ ಹುಟ್ಟಿದ ನಂತರ ಸಮಾಜದಲ್ಲಿ ಮಾನವೀಯತೆಯನ್ನು ತೋರಿದರೆ ನಾವು ಮಾನವರಾಗುತ್ತೇವೆ. ಇಂದಿನ ಸಮಾಜದಲ್ಲಿ ಮಾನವೀಯತೆ, ತೃಪ್ತಿ ಅನ್ನೋ ಗುಣ ಬಹಳ ಕಡಿಮೆಯಾಗಿದೆ. ಸಮಾಜದಲ್ಲಿ ತೃಪ್ತಿ ಹಾಗೂ ಮಾನವೀಯತೆ ಮೌಲ್ಯಗಳನ್ನು ಸೃಷ್ಟಿ ಮಾಡಬೇಕು. ಈ ನಿಟ್ಟಿನಲ್ಲಿ ಈ ಸಂದೇಶವನ್ನು ಮಕ್ಕಳಲ್ಲಿ ಅಳವಡಿಸಿದಾಗ ಖಂಡೀತವಾಗಿಯೂ ಮುಂದೆ ಸಮಾಜದಲ್ಲಿ ಶಾಂತಿ-ಸೌಹಾರ್ಧತೆ ನೆಲೆಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತರಾದ ವಿಶ್ವನಾಥ ಶೆಟ್ಟಿ,, ಉದ್ಯಮಿ ಶಿವರಾಮ್ ಬಿ.ಶೆಟ್ಟಿ, ಇರ್ಮಾಡಿ ಬೀಡು ಲೀಲಾ ಎಸ್. ಶೆಟ್ಟಿ, ವಿಜಯಲಕ್ಷ್ಮೀ ಯು. ಹೆಗ್ಡೆ, ಕೊಡವೂರಿನ ರವಿರಾಜ ಹೆಗ್ಡೆ,

ಆದಿ ಉಡುಪಿಯ ಕೃಷ್ಣ ಶೆಟ್ಟಿ, ಅಮೃತ ರಾಜೀವ ಆಳ್ವ, ಭಾಸ್ಕರ್ ಶೆಟ್ಟಿ, ಮಹೇಶ್ ಹೆಬ್ಬಾರ್, ರಕ್ಷಿತ್ ಶೆಟ್ಟಿ ಇರ್ಮಾಡಿಬೀಡು ಉಪಸ್ಥಿತರಿದ್ದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಚ್. ನಾಗರಾಜ್ ಹೆಗ್ಡೆ ಸ್ವಾಗತಿಸಿದರು, ಸುರೇಶ್ ಬಿ. ಶೆಟ್ಟಿಬೆಟ್ಟು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!