ಮಣಿಪಾಲ: ಕಾರು ಖರೀದಿಸಿ ಹಣ ನೀಡದೆ ವ್ಯಕ್ತಿಗೆ ವಂಚನೆ
ಮಣಿಪಾಲ ಏ.30 (ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರಿಂದ ಕಾರ್ ಖರೀದಿಸಿ ಹಣ ನೀಡದೇ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಣಿಪಾಲದ ಸುನೀಲ್ ಎಂಬವರಿಗೆ ಏಎಲ್‍ಎಕ್ಷ್ ಆಪ್ ಮೂಲಕ ಆನ್ ಲೈನ್ ನಲ್ಲಿ ಟಿ ಶ್ರೀನಿವಾಸ ಎಂಬುವವವರು ಪರಿಚಯವಾಗಿತ್ತು. ಏ.8 ರಂದು ಈತ ಸುನೀಲ್ ಅವರ ಕಾರನ್ನು ಖರೀದಿಸುವ ಬಗ್ಗೆ ಫೋನ್ ನಲ್ಲಿ ಮಾತುಕತೆ 1,60,000 ರೂ.ಗೆ ನಗದು ಹಣ ಕೊಟ್ಟು ಕಾರನ್ನು ತೆಗೆದುಕೊಂಡು ಹೋಗುವುದಾಗಿ ನಿರ್ಧಾರ ಮಾಡಲಾಗಿತ್ತು.
ಅದರಂತೆ ಏ.9ರಂದು ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಆರೋಪಿ ಟಿ ಶ್ರೀನಿವಾಸ ಬಂದು ಸುನೀಲ್ ಅವರಿಗೆ 10,000/- ರೂ. ನಗದು ಹಣ ಕೊಟ್ಟು, ನಂತರ 40,000/- ಹಣ ಗೂಗಲ್ ಪೇ ಮುಖಾಂತರ ವರ್ಗಾಯಿಸಿದ್ದ. ಆ ಬಳಿಕ ಅದೇ ದಿನ 2 ಚೆಕ್ ಕೊಟ್ಟು ಕಾರನ್ನು ತೆಗೆದುಕೊಂಡು ಹೋಗಿದ್ದನು. ಬಳಿಕ ಏ.10 ರಂದು ಯೂನಿಯನ್ ಬ್ಯಾಂಕ್‍ಗೆ ಹೋಗಿ ಆರೋಪಿ ಟಿ ಶ್ರೀನಿವಾಸ ಕೊಟ್ಟ ಚೆಕ್ ನ್ನು ಪರಿಶೀಲಿಸಿದಾಗ 2 ಚೆಕ್ ನಲ್ಲಿ ಹಣ ಇಡದೇ ಇದ್ದು ಉದ್ದೇಶ ಪೂರ್ವಕವಾಗಿ ಮೋಸ ಮಾಡಿರುವುದು ಅರಿವಾಗಿದೆ. ಈ ಬಗ್ಗೆ ಆ ರೋಪಿಗೆ ಕರೆ ಮಾಡಿ ಕೇಳಿದಾಗ ಆರೋಪಿಯು ಸುನೀಲ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.