ಕಾಪು: ಶುಧ್ಧವೆಂದು ನಕಲಿ ಜೇನು ತುಪ್ಪ ಮಾರಾಟ-ಹಲವರಿಗೆ ವಂಚನೆ
ಕಾಪು ಏ.23(ಉಡುಪಿ ಟೈಮ್ಸ್ ವರದಿ): ಕೆಲವು ಯುವಕರ ತಂಡ ಶುದ್ಧ ಜೇನುತುಪ್ಪ ಎಂದು ಹೇಳಿ ನಕಲಿ ಜೇನುತುಪ್ಪ ಮಾರಾಟ ಮಾಡಿ ಸಾರ್ವಜನಿಕರಿಗೆ ಸಾವಿರಾರು ರೂಪಾಯಿ ವಂಚಿಸಿರುವ ಘಟನೆ ಕಾಪುವಿನ ಶಂಕರಪುರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾಪುವಿನ ಶಂಕರಪುರದಲ್ಲಿ ಬೆಳಿಗ್ಗಿನ ಜಾವ ರಸ್ತೆಯ ಬಳಿ ಯುವಕರ ತಂಡವೊಂದು ಲೀಟರ್ ಗಟ್ಟಲೆ ಬೆಲ್ಲ ಸಕ್ಕರೆ ಮಿಶ್ರಿತ ಪಾಕವನ್ನು ತಂದು ಶುದ್ಧ ಜೇನುತುಪ್ಪ ಎಂದು ಮಾರಾಟ ಮಾಡುತ್ತಿದ್ದರು. ಈ ವೇಳೆ ಮಾಧ್ಯಮದವರು ಸ್ಥಳಕ್ಕೆ ತೆರಳಿ ಜೇನುತುಪ್ಪದ ಬಗ್ಗೆ ವಿಚಾರಿಸಿದಾಗ ಯುವಕರ ತಂಡ ಸ್ಥಳದಿಂದ ಪರಾರಿಯಾಗಿದೆ.
ಹೊರ ರಾಜ್ಯದಿಂದ ಬರುವ ಈ ತಂಡ ದೊಡ್ಡ ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿ ಬೆಲ್ಲ ಸಕ್ಕರೆ ಮಿಶ್ರಿತ ಪಾಕವನ್ನು ತಂದು ಶುದ್ಧ ತುಪ್ಪ ಎಂದು ಮಾರಾಟ ಮಾಡುತ್ತಿದ್ದರು. ಇದನ್ನು ನಂಬಿದ ಸಾರ್ವಜನಿಕರು ಕಡಿಮೆ ದರದಲ್ಲಿ ಜೇನುತುಪ್ಪ ಸಿಗುತ್ತೆ ಅಂತ ಲೀಟರ್ ಗಟ್ಟಲೆ ಖರೀದಿ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಯುವಕರ ತಂಡ ಶಿರ್ವ, ಪಡುಬಿದ್ರಿ,ಕಾಪು ಶಂಕರಪುರ ಪರಿಸರದಲ್ಲಿ ಸಾರ್ವಜನಿಕರನ್ನು ವಂಚಿಸುವಲ್ಲಿ ನಿರತವಾಗಿದೆ.