ಕೊರೋನಾ ಪ್ರಹಾರ : ಐಪಿಎಲ್ 2021 ಕೂಟ ರದ್ದು
ನವದೆಹಲಿ(ಉಡುಪಿ ಟೈಮ್ಸ್ ವರದಿ ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಸಂಕಷ್ಟ ಎದುರಾಗಿದೆ. ಸುಮಾರು ನಾಲ್ಕು ತಂಡಗಳ ಆಟಗಾರರಿಗೆ ಕೋವಿಡ್-19 ಸೋಂಕಿರುವುದು ಪತ್ತೆಯಾದ ಬಳಿಕ ಐಪಿಎಲ್ನ ಪಂದ್ಯ ಸದ್ಯಕ್ಕೆ ರದ್ದಾಗಿದೆ.
ಈಗಾಗಲೇ ಟ್ವಿಟ್ಟರ್ ನಲ್ಲಿ ಐಪಿಎಲ್ ರದ್ದು ಮಾಡಿ ಎಂಬ ಸಂದೇಶವು ಬರುತ್ತಿದ್ದು ಇದೀಗ ಅದಕ್ಕೆ ಪೂರಕವೆಂಬಂತೆ 2021ರ ಐಪಿಎಲ್ ಸ್ವಲ್ಪ ದಿನಗಳ ಕಾಲ ನಿಲುಗಡೆಯಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲ ಈ ಮಾಹಿತಿ ನೀಡಿದ್ದಾರೆ.