ಬ್ರಹ್ಮಾವರ: ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಿ: ಸೊರಕೆ
ಬ್ರಹ್ಮಾವರ ಏ.23(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ಕೊಡುಗೆ ತುಂಬಾ ದೊಡ್ಡದು ಎಂದು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಹೇಳಿದ್ದಾರೆ.
ಇಂದು ಬ್ರಹ್ಮಾವರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯನ್ನು ಸ್ವತಂತ್ರ ಜಿಲ್ಲೆಯಾಗಿಸಿದ ಕೀರ್ತಿ ಜಯಪ್ರಕಾಶ್ ಹೆಗ್ಡೆಯವರಿಗೆ ಸಲ್ಲುತ್ತದೆ. ಬ್ರಹ್ಮಾವರದ ಹೆಸರು ದೇಶದಾದ್ಯಂತ ಪಸರಿಸುವ ಕಾರ್ಯಾದಲ್ಲಿ ಜಯಪ್ರಕಾಶ್ ಹೆಗ್ಡೆ ಅವರ ಪಾತ್ರ ಮಹತ್ತರವಾದದ್ದು, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಇಡೀ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಎನ್ನುವಂತಹ ಕೀರ್ತಿ ಪಡೆಯಬೇಕದರೆ ಅದು ಜಯಪ್ರಕಾಶ್ ಹೆಗ್ಡೆ ಅವರ ಕೊಡುಗೆ ಎಂದರು.
ಹಾಗೂ ನಾರಾಯಣಗುರು ಅಧ್ಯಯನ ಪೀಠದ ಸ್ಥಾಪನೆಗೆ 2 ಕೋಟಿ ರೂ. ರಾಜ್ಯ ಸರಕಾರ ನೀಡಿದೆ. ಜೊತೆಗೆ ಕರಾವಳಿಯ ಮೀನುಗಾರರ ಅಭಿವೃದ್ಧಿಯಲ್ಲಿಯೂ ಜಯಪ್ರಕಾಶ್ ಹೆಗ್ಡೆ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.