ಮಣಿಪಾಲ: ಅಸ್ವಸ್ಥಗೊಂಡು ವ್ಯಕ್ತಿ ಮೃತ್ಯು
ಮಣಿಪಾಲ ಎ.17 (ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ಅಸ್ವಸ್ಥಗೊಂಡು ವ್ಯಕ್ತಿಯೊಬ್ಬರು ಮೃಪಟ್ಟ ಘಟನೆ ಉಡುಪಿಯ ಬಡಗಬೆಟ್ಟು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ರಾಜೇಶ್ ಪಿ ನಾವಲ್ಕರ್ (54) ಮೃತಪಟ್ಟವರು. ನಿನ್ನೆ ಸಂಜೆ ವೇಳೆ ಅಸ್ವಸ್ಥಗೊಂಡಿದ್ದ ರಾಜೇಶ್ ಅವರನ್ನು ಅವರ ತಮ್ಮ ಚಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ರಾಜೇಶ ಅವರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ತಮ್ಮ ನೀಡಿದ ಮಾಹಿತಿಯಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.