ಮಣಿಪಾಲ: ಹಣ ದ್ವಿಗುಣಗೊಳಿಸುವ ಆಸೆಗೆ ಬಿದ್ದು 1.65 ಲ. ರೂ. ಕಳೆದುಕೊಂಡ ವ್ಯಕ್ತಿ

ಮಣಿಪಾಲ ಎ.15 (ಉಡುಪಿ ಟೈಮ್ಸ್ ವರದಿ): ಹಣ ದ್ವಿಗುಣ ಗೊಳಿಸುವ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು 1.65 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಳ್ಳಿ ಗ್ರಾಮದ ನರಸಿಂಹ ಅವರು ಟೆಲಿಗ್ರಾಂ ನಲ್ಲಿದ್ದ  OPTIONTIPS ಎಂಬ ಶೇರು ಮಾರುಕಟ್ಟೆ ಬಗ್ಗೆ ಸಲಹೆ ನೀಡುವಂತಹ ಗ್ರೂಪ್‍ನ್ನು ಸುಮಾರು 15 ದಿನದಿಂದ ಉಪಯೋಗಿಸುತ್ತಿದ್ದರು, ಎ.1 ರಂದು ಟೆಲಿಗ್ರಾಂ ಹುಡುಕುತ್ತಿದ್ದಾಗ ಮೊದಲು ಉಪಯೋಗಿಸುತ್ತಿದ್ದ ಟೆಲಿಗ್ರಾಂ ನಂತೆಯೇ ಹೋಲುವ ಇನ್ನೊಂದು OPTIONTIPS ಟೆಲಿಗ್ರಾಂ ಇದ್ದು ಅದನ್ನು ಮೊದಲು ಉಪಯೋಗಿಸಿದ ಟೆಲಿಗ್ರಾಂ ಎಂದು ತಿಳಿದು ಉಪಯೋಗಿಸಿದಾಗ ಅದರಲ್ಲಿ ಹಣ ದ್ವಿಗುಣಗೊಳಿಲಾಗುತ್ತದೆ ಎಂಬ ಮಾಹಿತಿ ನೀಡಲಾಗಿತ್ತು. ಇದನ್ನು ನಂಬಿದ ನರಸಿಂಹ ಅವರು ಆ್ಯಪ್‍ನಲ್ಲಿ ಅಪರಿಚಿತ ವ್ಯಕ್ತಿ ಸೂಚಿಸಿದಂತೆ ಹಂತ ಹಂತವಾಗಿ ಒಟ್ಟು ರೂ 1,65,584/- ಹಣ ವರ್ಗಾವಣೆ ಮಾಡಿರುತ್ತಾರೆ. ಆದರೆ ಅಪರಿಚಿತ ವ್ಯಕ್ತಿಯು ಹಣ ದ್ವಿಗುಣಗೊಳಿಸಲಾಗುತ್ತದೆ ಎಂದು ನಂಬಿಸಿ ಹಣ ಪಡೆದು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!