ಉಡುಪಿ: ಪೊಲೀಸ್ ಠಾಣೆ ಆವರಣಗೋಡೆ ಮೇಲೆ ಚುನಾವಣಾ ಜಾಗೃತಿ ಬರಹ
ಉಡುಪಿ ಎ.15(ಉಡುಪಿ ಟೈಮ್ಸ್ ವರದಿ): ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.
ಉಡುಪಿ ನಗರದಾದ್ಯಂತ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸಿ ಸಾರ್ವಜನಿಕರಲ್ಲಿ ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಇದೇ ನಿಟ್ಟಿನಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಕಚೇರಿಯ ಆವರಣ ಗೋಡೆಯ ಮೇಲೆ ಮತದಾನದ ಜಾಗೃತಿ ಬರಹವನ್ನು ಬರೆಯಲಾಗಿದೆ. ಈ ಬರಹದಲ್ಲಿ ಪ್ರಥಮ ಮತದಾರರು ನೀವಾಗಿ, ನೀ ಬ್ಯಾಲೋಟ್(ಮತದಾನದ ಯಂತ್ರ) ಬುಲೆಟ್‍ಗಿಂತ ಶಕ್ತಿಶಾಲಿ ಎಂದು ಬರೆಯಲಾಗಿದೆ. ಹಾಗೂ ಮತದಾನ ಪ್ರಜಾಪ್ರಭುತ್ವದ ವರದಾನ ಎಂದು ಬರೆಯಲಾಗಿದೆ.
ಇದೀಗ ಪೊಲೀಸರ ಈ ಮತದಾನ ಜಾಗೃತಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲರಲ್ಲಿಯೂ ಮತದಾನದ ಜಾಗೃತಿ ಮೂಡಿವುದು ಅಗತ್ಯವಾಗಿದೆ.